ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸ್ಥಳೀಯವಾಗಿ ರಷ್ಯಾದ ಸ್ಪುಟ್ನಿಕ್-ವಿ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಭಾರತೀಯ ರಷ್ಯಾ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಮಾಹಿತಿ ನೀಡಿದ್ದಾರೆ. ಇನ್ನು ಆಗಸ್ಟ್​ –ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತ ಮತ್ತು ರಷ್ಯಾ ಸುಮಾರು 35-40 ಮಿಲಿಯನ್ ಅಂದ್ರೆ 3 ರಿಂದ 4 ಕೋಟಿ ಡೋಸ್​ ವ್ಯಾಕ್ಸಿನ್​ನ್ನು ಭಾರತದಲ್ಲೇ ತಯಾರಿಸಲು ನಿರ್ಧರಿಸಿವೆ ಎನ್ನಲಾಗಿದೆ.

ವ್ಯಾಕ್ಸಿನ್ ತಯಾರಿಗೆ ಬೇಕಾದ ತಂತ್ರಜ್ಞಾನವನ್ನ ಭಾರತಕ್ಕೆ ಕಳುಹಿಸುವ ಮುನ್ನ ರಷ್ಯಾ ಸುಮಾರು 1.8 ಕೋಟಿ ಡೋಸ್​ಗಳನ್ನು ಭಾರತಕ್ಕೆ ರವಾನಿಸಲಿದೆ ಎನ್ನಲಾಗಿದೆ. ಮೇ ತಿಂಗಳಿನಲ್ಲಿ 30 ಲಕ್ಷ, ಜೂನ್​ನಲ್ಲಿ 50 ಲಕ್ಷ ಹಾಗೂ ಜುಲೈನಲ್ಲಿ 1 ಕೋಟಿ ಲಸಿಕೆಯನ್ನ ಕಳುಹಿಸಲಿದೆ ಎನ್ನಲಾಗಿದೆ. ರಾಯಭಾರಿಯ ಪ್ರಕಾರ ಭಾರತದಲ್ಲಿ ಸುಮಾರಿ 850 ಮಿಲಿಯನ್ ಡೋಸ್ ಸ್ಪುಟ್ನಿಕ್ ವ್ಯಾಕ್ಸಿನ್ ತಯಾರಾಗಲಿದೆಯಂತೆ. ಸುಮಾರು 65-70 ಪರ್ಸೆಂಟ್ ವ್ಯಾಕ್ಸಿನ್​ ಭಾರದಲ್ಲೇ ತಯಾರಾಗಲಿದೆ ಎಂದು ರಾಯಭಾರಿ ವರ್ಮಾ ಹೇಳಿಕೆ ನೀಡಿದ್ದಾರೆ.

 

The post ಸ್ಪುಟ್ನಿಕ್-ವಿ ವ್ಯಾಕ್ಸಿನ್​ನ 70% ಡೋಸ್​ಗಳು ಭಾರತದಲ್ಲೇ ತಯಾರಾಗಲಿವೆ appeared first on News First Kannada.

Source: newsfirstlive.com

Source link