ನವದೆಹಲಿ: ದೇಶದಾದ್ಯಂತ ವ್ಯಾಕ್ಸಿನೇಷನ್ ಶರವೇಗದಲ್ಲಿ ಸಾಗುತ್ತಿದೆ. ಕೊರೊನಾ ವ್ಯಾಕ್ಸಿನ್​ಗಳಾದ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಈಗಾಗಲೇ ಜನರಿಗೆ ನೀಡಲಾಗ್ತಿದೆ. ಇದರ ಜೊತೆಗೆ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ -ವಿ ಕೆಲವೇ ದಿನಗಳಲ್ಲಿ ಅಪೋಲೋ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ.

ಈಗಾಗಲೇ ಸ್ಪುಟ್ನಿಕ್ ವ್ಯಾಕ್ಸಿನ್ ತಯಾರಿಸಲು ಡಾ.ರೆಡ್ಡೀಸ್ ಫಾರ್ಮಾಸಿಟಿಕಲ್ ಕಂಪನಿ ಅನುಮತಿ ಪಡೆದುಕೊಂಡಿದೆ. ಈ ಮಧ್ಯೆ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೀರಮ್ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DGCI) ಗೆ ಅರ್ಜಿ ಸಲ್ಲಿಸಿದ್ದು ಸ್ಪುಟ್ನಿಕ್- ವಿ ವ್ಯಾಕ್ಸಿನ್ ತಯಾರಿಸಲು ಲೈಸೆನ್ಸ್​​ಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದೆ.

The post ಸ್ಪುಟ್ನಿಕ್-ವಿ ವ್ಯಾಕ್ಸಿನ್ ತಯಾರಿಕೆಗೆ ಅನುಮತಿ ಕೋರಿ DCGI ಗೆ ಮನವಿ ಮಾಡಿದ ಸೀರಮ್ appeared first on News First Kannada.

Source: newsfirstlive.com

Source link