ಹೈದರಾಬಾದ್: ಭಾರತದಲ್ಲಿ ಇಂದು ಮೊದಲ ಸ್ಪುಟ್ನಿಕ್ ವಿ ಲಸಿಕೆ ನೀಡಲಾಗಿದೆ.. ಹೈದರಾಬಾದ್​ನಲ್ಲಿ ವ್ಯಕ್ತಿಯೊಬ್ಬರಿಗೆ ಮೊದಲ ಡೋಸ್ ನೀಡಲಾಗಿದೆ. ಇದೇ ವೇಳೆ ಸ್ಪುಟ್ನಿಕ್ ವಿ ಒಂದು ಡೋಸ್ ನ ಬೆಲೆ 948 ರೂ ಎಂದು ನಿಗದಿ ಮಾಡಲಾಗಿದ್ದು ಜಿಎಸ್​ಟಿ ಸೇರಿ ಒಂದು ಡೋಸ್​ಗೆ 995 ರೂ 40 ಪೈಸೆಯಾಗಲಿದೆ ಎಂದು ಡಾ. ರೆಡ್ಡೀಸ್ ಲ್ಯಾಬ್​ ಮಾಹಿತಿ ನೀಡಿದೆ.

ಡಾ. ರೆಡ್ಡಿ ಕಂಪನಿ ಹೇಳಿರೋ ಪ್ರಕಾರ.. ಇತರ ಆರು ಉತ್ಪಾದಕ ಪಾಲುದಾರರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು.. ಉಳಿದ ಆರು ಉತ್ಪಾದಕ ಪಾಲುದಾರ ಸಂಸ್ಥೆಗಳು ಇದೆ ಬೆಲೆಯ ಒಪ್ಪಂದದಲ್ಲಿರಲಿದ್ದಾರೆ. ಜೂನ್ ವೇಳೆಗೆ ಭಾರತದಾದ್ಯಂತ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಶೇ 5 ರಷ್ಟು ಜಿಎಸ್ ಟಿ ವ್ಯಾಕ್ಸಿನ್​ಗೆ ತಗುಲಲಿದೆ ಎಂದು ಡಾ ರೆಡ್ಡಿಸ್ ಲ್ಯಾಬ್ ನಿಂದ ಮಾಹಿತಿ ಹೊರಬಿದ್ದಿದೆ.

The post ಸ್ಪುಟ್ನಿಕ್-ವಿ ಸಿಂಗಲ್ ಡೋಸ್ ಬೆಲೆ ಜಿಎಸ್​ಟಿ ಸೇರಿ ₹995.40 ಪೈಸೆ.. ದರನಿಗದಿ ಮಾಡಿದ ರೆಡ್ಡೀಸ್ ಲ್ಯಾಬ್ appeared first on News First Kannada.

Source: newsfirstlive.com

Source link