ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಟೂರ್ನಿಗೆ ಸಿದ್ಧತೆಗಳು ಭರದಿಂದ ಸಾಗಿವೆ. ಹಾಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಮಗೆ ಬೇಕಾದ ಆಟಗಾರರನ್ನು ಈ ಬಾರಿ ಕೂಡ ಟಾರ್ಗೆಟ್ ಮಾಡಲಿದೆ ಎಂಬುದು ಸ್ಪಷ್ಟವಾಗಿದೆ.
ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿರುವ ಡ್ವೇನ್ ಬ್ರಾವೊ ಮುಂದಿನ ಸೀಸನ್ ಐಪಿಎಲ್ ಆಡುವ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಡ್ವೇನ್ ಬ್ರಾವೊ ಮುಂದಿನ ಸೀಸನ್ ಐಪಿಎಲ್ ಆಡಲಿದ್ದಾರೆ ಎಂದು ಖುದ್ದು ಸಿಎಸ್ಕೆ ಸಿಇಓ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
ಇನ್ನು, ಸದ್ಯದಲ್ಲೇ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹೀಗಾಗಿ, ಡ್ವೇನ್ ಬ್ರಾವೊ ಹೆಸರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೂ, ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿಎಸ್ಕೆ ಪ್ರಯತ್ನ ನಡೆಸಲಿದೆ.
The post ಸ್ಫೋಟಕ ಬ್ಯಾಟ್ಸ್ಮನ್ ಡ್ವೇನ್ ಬ್ರಾವೊ ಐಪಿಎಲ್ ಆಡೋದು ಖಚಿತ appeared first on News First Kannada.