ಹಾವೇರಿ: ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಮೇಲ್ವರ್ಗದ ವ್ಯಕ್ತಿಯೋರ್ವ ಅಡ್ಡಿ‌ಪಡಿಸಿದ ಆರೋಪದ ಹಿನ್ನೆಲೆ ದಲಿತ ಕುಟುಂಬವೊಂದು ಗ್ರಾಮ‌ಪಂಚಾಯತಿ ಎದುರು‌ ಅಂತ್ಯ ಸಂಸ್ಕಾರ ಮಾಡಲು ‌ಮುಂದಾದ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಲಿತ ಕುಟುಂಬದ ಹನುಮವ್ವ ಅಣ್ಣಿಗೇರಿ ಎಂಬ ಹಿರಿಯ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅಂತ್ಯಸಂಸ್ಕಾರ‌ ಮಾಡಲು ಕುಟುಂಬದ ಸದಸ್ಯರು ಸ್ಮಶಾನಕ್ಕೆ ಕಟ್ಟಿಗೆ ತಗೆದುಕೊಂಡು ಹೋಗುವ ಸಮಯದಲ್ಲಿ ಮೇಲ್ವರ್ಗದ ವ್ಯಕ್ತಿಯೋರ್ವ ಅಡ್ಡಿಪಡಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಸ್ಮಶಾನ ನಮ್ಮ ಹೆಸರಿನಲ್ಲಿದೆ ನೀವು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು ಎಂದು ಅಡ್ಡಿಪಡಿಸಿದ್ದಾನಂತೆ.

ಇದರಿಂದ ‌ಕಂಗಾಲಾದ ಕುಟುಂಬಸ್ಥರು ಗ್ರಾಮ ಪಂಚಾಯತಿ ಮುಂದೆ ಅಂತ್ಯಸಂಸ್ಕಾರ ಮಾಡಲು‌ ಮುಂದಾಗಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು ಹಾಗೂ‌ ಪೊಲೀಸರು ಗ್ರಾಮದ ಜನರನ್ನು ಮನವೊಲಿಸುವ ಮೂಲಕ ಮತ್ತೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅನುವು‌ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

The post ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ನಕಾರ: ಪಂಚಾಯ್ತಿ ಎದುರೇ ಶವ ಸುಡಲು ಮುಂದಾದ ದಲಿತ ಕುಟುಂಬ appeared first on News First Kannada.

Source: newsfirstlive.com

Source link