ಚಿಕ್ಕಬಳ್ಳಾಪುರ: ನಗರದ ನಿಮ್ಮಾಕಲಕುಂಟೆ ಬಳಿಯ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೋವಿಡ್ ಸೋಂಕಿತ ಶವವನ್ನು ಮಣ್ಣು ಮಾಡದೆ ಬಿಸಾಡಿ ಹೋಗಿದ್ದರಾ ಎಂಬ ಅನುಮಾನ ಮೂಡಿದೆ.

ಮೃತದೇಹ ಬಿಸಾಡಿ ಮೂರ್ನಾಲ್ಕು ದಿನಗಳಾಗಿದ್ದು, ಮೃತದೇಹವನ್ನು ಆಸ್ಪತ್ರೆಯಲ್ಲಿ ಪ್ಯಾಕ್ ಮಾಡಿದ ರೀತಿಯಲ್ಲಿದೆ. ನಾಯಿಗಳು ಮೃತದೇಹದ ಭಾಗಗಳನ್ನ ಎಳೆದು ತಿಂದಿವೆ. ಇನ್ನೂ ಈ ಸ್ಮಶಾನದ ಅಕ್ಕ ಪಕ್ಕ ಜನವಸತಿ ಪ್ರದೇಶವಾಗಿದ್ದು, ಸುತ್ತಮುತ್ತಲ ಜನ ಭಯಭೀತರಾಗಿದ್ದಾರೆ. ಇದು ಕೋವಿಡ್ ಸೋಂಕಿತ ವ್ಯಕ್ತಿಯ ಶವ ಆದ್ರೆ ಸೋಂಕು ಹಬ್ಬಿದರೆ ಯಾರು ಹೊಣೆ ಅಂತ ಸಾರ್ವಜನಿರಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ಮತ್ತೊಂದೆಡೆ ಗುಣಿ ಅಗೆಯುವಾಗ ಮೊದಲೇ ಹೂತಿದ್ದ ಮೃತದೇಹವನ್ನ ಹೊರಗೆ ಹಾಕಿದ್ರಾ ಅನ್ನೋ ಅನುಮಾನ ಸಹಮೂಡಿದೆ. ಏನೇ ಆದ್ರೂ ಮೃತದೇಹವನ್ನ ಮಣ್ಣು ಮಾಡಿ ಆತಂಕ ದೂರ ಮಾಡುವಂತೆ ಸ್ಥಳೀಯರು ನಗರಸಭೆಗೆ ಮನವಿ ಮಾಡಿಕೊಂಡಿದ್ದಾರೆ.

The post ಸ್ಮಶಾನದಲ್ಲಿ ಕೋವಿಡ್ ಸೋಂಕಿತನ ಶವ ಬಿಸಾಡಿ ಹೋದ್ರಾ? appeared first on Public TV.

Source: publictv.in

Source link