ಬೆಂಗಳೂರು: ಕಳೆದ ರಾತ್ರಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯ ಪರಿಶೀಲನೆ ನಡೆಸಿದರು.  ಬಿಬಿಎಂಪಿ ಅಧಿಕಾರಿಗಳಿಂದ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಅವರು​, ಮಳೆಗಾಲ ಪ್ರಾರಂಭವಾಗ್ತಿರೋದ್ರಿಂದ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಸ್ಮಾರ್ಟ್ ಸಿಟಿ ಬೆಂಗಳೂರು ಯೋಜನೆಯಡಿ 22ಕಿಲೋಮೀಟರ್ ರಸ್ತೆ ಡಾಂಬರೀಕರಣ ಮಾಡಲಾಗ್ತಿದೆ. ಸದ್ಯ ಕಾಮಗಾರಿ ನಿಧಾನಗತಿಯಲ್ಲಿ ನಡೀತಿದೆ. 14 ಕಿಲೋಮೀಟರ್ ರಸ್ತೆ ಡಾಂಬರೀಕರಣ ಮುಗಿದಿದ್ದು, ಉಳಿದ ಎಂಟು ಕಿಲೋಮೀಟರ್ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ.

ಮಳೆಗಾಲ ಪ್ರಾರಂಭವಾಗಿರೋ ಹಿನ್ನೆಲೆ ಜೂನ್. 30ನೇ ತಾರೀಖಿನೊಳಗೆ ಕಾಮಗಾರಿ ಮುಗಿಸುವಂತೆ ರಾಕೇಶ್ ಸಿಂಗ್ ಸೂಚನೆ ನೀಡಿದ್ದಾರೆ. ಎರಡು ಶಿಫ್ಟ್ ನಲ್ಲಿ ಕೆಲಸ ಮಾಡಿಸೋಕೆ ಆದೇಶ ನೀಡಿದ್ದು, ನೈಟ್ ಶಿಫ್ಟ್ ನಲ್ಲೂ ಕೆಲಸ ಮಾಡಿಸಲಾಗ್ತಿದೆ. ಬ್ರಿಗೆಡ್ ರೋಡ್, ಇನ್​ಫ್ಯಾಂಟರಿ ರೋಡ್ ಹಾಗೂ ಹಲಸೂರು ರೋಡ್​​ನಲ್ಲಿ ಡಾಂಬರೀಕರಣ ಮಾಡಲಾಗ್ತಿದೆ. 31ನೇ ತಾರೀಖಿಗೆ ಹನ್ನೊಂದು ರಸ್ತೆಗಳನ್ನ ಲೋಕಾರ್ಪಣೆ ಮಾಡಲಾಗುತ್ತೆ. ಆಗಸ್ಟ್​​ 15ರೊಳಗೆ ಇಡೀ ಪ್ರಾಜೆಕ್ಟ್ ಮುಗಿಯುತ್ತೆ ಅಂತ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಚೀಫ್ ಇಂಜಿನಿಯರ್ ಪ್ರಹ್ಲಾದ್ ಹೇಳಿದ್ದಾರೆ.

The post ಸ್ಮಾರ್ಟ್​ ಸಿಟಿ: ಬೆಂಗಳೂರಲ್ಲಿ ಜೂ. 30ರೊಳಗೆ ಡಾಂಬರೀಕರಣ ಮುಗಿಸಲು ಸೂಚನೆ appeared first on News First Kannada.

Source: newsfirstlive.com

Source link