ಬೆಂಗಳೂರು: ಎಂಐ ಇಂಡಿಯಾದ ಉಪ ಬ್ರಾಂಡ್ ರೆಡ್‌ಮಿ ಇಂಡಿಯಾ ಇಂದು ರೆಡ್‌ಮಿ ಸ್ಮಾರ್ಟ್ ಟಿ.ವಿ ಎಕ್ಸ್ ಸೀರೀಸ್ ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್ ಟಿ.ವಿ ಕ್ಷೇತ್ರಕ್ಕೆ ಪ್ರವೇಶಿಸಿದೆ. ಪ್ರಾಮಾಣಿಕ ಬೆಲೆಯಲ್ಲಿ ಹೆಚ್ಚಿನ ಗುಣಮಟ್ಟವನ್ನು ಅತ್ಯುತ್ತಮ ವಿಶೇಷತೆಗಳೊಂದಿಗೆ ತರುವ ತನ್ನ ಸಿದ್ಧಾಂತದ ಮುಂದುವರಿಕೆಯಾಗಿ ರೆಡ್‌ಮಿ ಸ್ಮಾರ್ಟ್ ಟಿ.ವಿ ಎಕ್ಸ್ ಸೀರೀಸ್‌ನೊಂದಿಗೆ ಕಂಪನಿಯು ಗ್ರಾಹಕರಿಗೆ ಹೆಚ್ಚು ಪರಿಣಾಮಕಾರಿ ಅನುಭವಗಳನ್ನು ನೀಡುವ ಗುರಿ ಹೊಂದಿದೆ.

 ಎಕ್ಸ್ಎಲ್ ಪರದೆ: ರೆಡ್‌ಮಿ ಸ್ಮಾರ್ಟ್ ಟಿ.ವಿ. ಎಕ್ಸ್ ಸೀರೀಸ್ ಮೂರು ವಿಭಿನ್ನ ಗಾತ್ರಗಳ ವೇರಿಯೆಂಟ್‌ಗಳು 50”, 55” ಮತ್ತು 65” ಇಂಚುಗಳಲ್ಲಿ ಬಂದಿದೆ.  ಹೊಸ ಟಿ.ವಿ.ಗಳು ವಿವಿಡ್ ಪಿಕ್ಚರ್ ಎಂಜಿನ್, ಇನ್-ಹೌಸ್ ಇಮೇಜ್ ಪ್ರೊಸೆಸಿಂಗ್ ಆಲ್ಗಾರಿದಂ ಹೊಂದಿದೆ. ಈ ಟಿ.ವಿ.ಗಳು 4ಕೆ ಪ್ಯಾನೆಲ್ ಅನ್ನು 3840×2160 ರೆಸೊಲ್ಯೂಷನ್‌ನೊಂದಿಗೆ ನೀಡಿದ್ದು ಅದು ಉಜ್ವಲ ವೀಕ್ಷಣೆಯ ಅನುಭವ ನೀಡುತ್ತದೆ.

ರೆಡ್‌ಮಿ ಸ್ಮಾರ್ಟ್ ಟಿ.ವಿ. ಎಕ್ಸ್ ಸೀರೀಸ್ ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10+ ಬೆಂಬಲದೊಂದಿಗೆ ಬಂದಿದೆ. ಮೃದು, ದೋಷರಹಿತ ವೀಕ್ಷಣೆಯ ಅನುಭವಕ್ಕೆ ಹೊಸ ರೆಡ್‌ಮಿ ಸ್ಮಾರ್ಟ್ ಟಿ.ವಿ. ಎಕ್ಸ್ ಸೀರೀಸ್ ರಿಯಾಲಿಟಿ ಫ್ಲೋ ಡಿಸ್ ಪ್ಲೇ ಮೂಲಕ ಮೋಷನ್ ಎಸ್ಟಿಮೇಷನ್, ಮೋಷನ್ ಕಾಂಪೆನ್ಸೇಷನ್ ಅನ್ನು ಈ ವರ್ಗಕ್ಕೆ ತಂದಿದೆ.

ಎಕ್ಸ್ಎಲ್ ಆಡಿಯೊ: ತನ್ನ ಉನ್ನತ ಶಬ್ದದ ಗುಣಮಟ್ಟದಿಂದ ಯಾವುದೇ ಕೋಣೆಯನ್ನು ಐಷಾರಾಮಿ ಹೋಮ್ ಥಿಯೇಟರ್ ಆಗಿ ಪರಿವರ್ತಿಸುವ ರೆಡ್‌ಮಿ ಟಿ.ವಿ. ಎಕ್ಸ್ ಸೀರೀಸ್ 30ವ್ಯಾಟ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಸರೌಂಡ್ ಸೌಂಡ್ ಅನುಭವ ಹೆಚ್ಚಿಸುವ ಮತ್ತು ನೀಡುವ ಡಿಟಿಎಸ್ ವರ್ಚುವಲ್ ಹೊಂದಿದ್ದು, ಇದು ಬಾಸ್ ಕ್ಲಾರಿಟಿ, ಸೌಂಡ್ ವರ್ಚುಯಲೈಸರ್ ಹೊಂದಿದೆ.

ಎಕ್ಸ್ಎಲ್ ಕಾರ್ಯಕ್ಷಮತೆ: ಹೊಸದಾಗಿ ಬಿಡುಗಡೆಯಾದ ಈ ಸೀರೀಸ್ 64-ಬಿಟ್ ಕ್ವಾಡ್-ಕೋರ್ ಎ55 ಪ್ರೊಸೆಸರ್ ಹೊಂದಿದ್ದು ಮಾಲಿ ಜಿ52 ಗ್ರಾಫಿಕ್ಸ್ ನೊಂದಿಗೆ ಬಂದಿದೆ. ಶಕ್ತಿಯುತ ಸೆಟಪ್ 2 ಜಿಬಿ ರ‍್ಯಾಮ್ ಮತ್ತು 16ಜಿಬಿ ಸಂಗ್ರಹ ಇದೆ.

ಎಕ್ಸ್ಎಲ್ ಸಾಫ್ಟ್ವೇರ್: ಹೊಸ ಸರಣಿಯು ಆಂಡ್ರಾಯಿಡ್ ಟಿ.ವಿ.10 ಹೊಂದಿದ್ದು ಇದು ಬಳಕೆದಾರರಿಗೆ ಕಂಟೆಂಟ್ ಸೇವೆಗಳು ಮತ್ತು ಡಿವೈಸ್‌ಗಳಿಗೆ ಅದರ ವಿಸ್ತಾರ ಪ್ಲಾಟ್‌ಫಾರಂ ಮೂಲಕ ಸುಲಭ ಲಭ್ಯತೆ ನೀಡುತ್ತದೆ. ಉತ್ತಮ ದೈನಂದಿನ ಬಳಕೆಗೆ ಉನ್ನತೀಕರಿಸಲಾದ ಈ ಸರಣಿಯು ಅತ್ಯಾಧುನಿಕ ಪ್ಯಾಚ್‌ವಾಲ್ ಆವೃತ್ತಿ ಹೊಂದಿದ್ದು ಅದರಿಂದ 16 ವಿವಿಧ ಭಾಷೆಗಳ 25+ ಕಂಟೆಂಟ್ ಪಾಲುದಾರರ ಲಭ್ಯತೆ ನೀಡುತ್ತದೆ. ಇದು ಯೂನಿವರ್ಸಲ್ ಸರ್ಚ್, ಕಿಡ್ಸ್ ಮೋಡ್, ಸ್ಮಾರ್ಟ್ ರೆಕಮೆಂಡೇಷನ್ಸ್, ಲೈವ್ ಸ್ಪೋರ್ಟ್ಸ್, ಯೂಸರ್ ಸೆಂಟರ್ ಮತ್ತಿತರೆ ವಿಶಿಷ್ಟತೆಗಳನ್ನು ಹೊಂದಿದೆ. ಇದು ಗೂಗಲ್ ಅಸಿಸ್ಟೆಂಟ್ ಮತ್ತು ಕ್ರೋಮ್‌ಕಾಸ್ಟ್ ಬಿಲ್ಟ್-ಇನ್ ಬೆಂಬಲ ನೀಡುತ್ತದೆ.

ಎಕ್ಸ್ಎಲ್ ಕನೆಕ್ಟಿವಿಟಿ: ಮುಂದಿನ ತಲೆಮಾರಿನ ವೀಕ್ಷಣೆಯ ಮುಂದಿನ ತಲೆಮಾರಿನ ಕನ್ಸೋಲ್‌ಗಳು ಮತ್ತು ವಿಡಿಯೋ ಡಿವೈಸ್‌ಗಳಿಗೆ ಉನ್ನತೀಕರಿಸಿದ ಹೊಸ ಸರಣಿಯು ಎಚ್‌ಡಿಎಂಐ 2.1 ಕಂಪ್ಯಾಟಿಬಲ್ ಪೋರ್ಟ್ ಇವೆ.

 ಲಭ್ಯತೆ:  ರೆಡ್‌ಮಿ ಸ್ಮಾರ್ಟ್ ಟಿ.ವಿ.ಗಳು  ಎಂಐ.ಕಾಂ ಅಮೆಜಾ಼ನ್.ಇನ್, ಎಂಐ ಹೋಮ್ ಮತ್ತು ಎಂಐ ಸ್ಟುಡಿಯೊ ಸ್ಟೋರ್‌ಗಳಲ್ಲಿ ಮಾರ್ಚ್ 26ರಂದು ಮಧ್ಯಾಹ್ನ 12ರಿಂದ ದೊರೆಯುತ್ತವೆ.

ಬೆಲೆ: ರೆಡ್‌ಮಿ ಸ್ಮಾರ್ಟ್ ಟಿ.ವಿ. ಎಕ್ಸ್ 65: 57,999 ರೂ.

ರೆಡ್‌ಮಿ ಸ್ಮಾರ್ಟ್ ಟಿ.ವಿ. ಎಕ್ಸ್55: 38,999 ರೂ.

ರೆಡ್‌ಮಿ ಸ್ಮಾರ್ಟ್ ಟಿ.ವಿ. ಎಕ್ಸ್50: 32,999 ರೂ.

ಬಿಡುಗಡೆಯ ಆಫರ್‌ಗಳು: ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳು ಮತ್ತು ಇಎಂಐಗೆ 2000 ರಿಯಾಯಿತಿ ಸಹ ಲಭ್ಯವಿದೆ.

 

ಕೆ.ಎಸ್‍. ಬನಶಂಕರ ಆರಾಧ್ಯ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More