ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡುತ್ತಿರುವ ಬೆನ್ನಲ್ಲೇ ಹಾಗೂ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿರುವ ಕಾರಣ ಸ್ಯಾಂಡಲ್​ವುಡ್​​ನಲ್ಲಿ ಚಿತ್ರೀಕರಣ ಕಾರ್ಯಗಳು ಗರಿಗೆದರಿವೆ.

ಕಳೆದ ಎರಡು ತಿಂಗಳಿಂದ ಆಲ್ ಮೋಸ್ಟ್ ಆಲ್ ಕನ್ನಡದ ಎಲ್ಲಾ ಸಿನಿಮಾ ಶೂಟಿಂಗ್​​​ಗಳು ಸ್ಥಗಿತಗೊಂಡಿದ್ವು. ಆದ್ರೆ ಈಗ ಸ್ಯಾಂಡಲ್​ವುಡ್​ನಲ್ಲಿ ಅಕ್ಕ ಪಕ್ಕದ ಇಂಡಸ್ಟ್ರಿಗಳಂತೆ ಚಿತ್ರೀಕರಣ ಪ್ರಾರಂಭವಾಗುತ್ತಿವೆ.

ಯಾವಾಗ ಕೋವಿಡ್​ ಕೇಸಸ್ ಕಡಿಮೆಯಾಗಿ ಶೂಟಿಂಗ್​​ಗೆ ಅನುವು ಮಾಡಿಕೊಡ್ತಾರೋ ಎಂದು ಕಾದಿದ್ದ ಚಿತ್ರರಂಗದಲ್ಲಿ ಈಗ ಸಂತಸದ ವಾತಾವರಣ.. ರೈತರು ಮಳೆ ಬಂದು ನಾಟಿ ಮಾಡಲು ಗದ್ದೆಗಳಿಗೆ ಇಳಿದಾಗ ಆಗುವ ಸಂತೋಷದಂತೆ ಬಣ್ಣದ ಲೋಕದ ಮಂದಿ ಸಂತಸದಲ್ಲಿದ್ದಾರೆ..

ಲಾಕ್ ಡೌನ್ ಆದಾಗ ಮೊದಲು ಸಹಾಯಕ್ಕೆ ನಿಂತ ನಟ ಉಪೇಂದ್ರ ಈಗ ಅನ್​ಲಾಕ್ ಆಗುತ್ತಿದ್ದಂತೆಯೇ ಮೊದಲು ಶೂಟಿಂಗ್​​​ಗೆ ಹಾಜರಾಗಲು ಸಜ್ಜಾಗಿದ್ದಾರೆ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಶೂಟಿಂಗ್​​​ಗೆ ಇಂದಿನಿಂದಲೇ ತೆರಳಿದ್ದಾರೆ. ಬೆಂಗಳೂರಿನ ಮಿನರ್ವ ಮಿಲ್​​ನಲ್ಲಿ ಕಬ್ಜ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

ಇನ್ನು ಉಪೇಂದ್ರ ಅವರ ಮತ್ತೊಂದು ಸಿನಿಮಾ ಲಗಾಮ್ ಕೂಡ ಶೂಟಿಂಗ್​​​ಗೆ ಅಣಿಯಾಗಿದೆ. ಕೆ.ಮಾದೇಶ್ ನಿರ್ದೇಶನದ ಲಗಾಮ್ ಸಿನಿಮಾದ ಶೂಟಿಂಗ್ ಮುಂದಿನವಾರ ಮೈಸೂರಿನಲ್ಲಿ ಪ್ರಾರಂಭವಾಗಲಿದೆ. ಕಬ್ಜ ಮತ್ತು ಲಗಾಮ್ ಸಿನಿಮಾಗಳ ಶೂಟಿಂಗ್​​​ಗಳನ್ನ ಶೆಡ್ಯೂಲ್ ಪ್ರಕಾರ ಮುಗಿಸಲಿದ್ದಾರೆ ಬುದ್ಧಿವಂತ ಉಪ್ಪಿ..

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಶಿವಪ್ಪ ಸಿನಿಮಾದ ಶೂಟಿಂಗ್ ಕೂಡ ಕಳೆದ ಭಾನುವಾರದಿಂದಲೇ ಪ್ರಾರಂಭವಾಗಿದೆ..

ಒಟ್ಟಿನಲ್ಲಿ ಲಾಕ್​ಡೌನ್ ನಂತರ ಸ್ಯಾಂಡಲ್​ವುಡ್ ಮತ್ತೆ ಚುರುಕಾಗಿದೆ.. ಹೆಚ್ಚು ಸಿನಿಮಾ ಕಾರ್ಯಗಳು ಕನ್ನಡ ಚಿತ್ರರಂಗದಲ್ಲಿ ಆಗಿ ಸಿನಿಮಾ ಕಲಾವಿದರು ಹಾಗೂ ಸಿನಿಮಾ ಕಾರ್ಮಿಕರಿಗೆ ಕೆಲಸ ಸಿಗುವಂತೆ ಆಗಲಿ ಅನ್ನೋದು ನಮ್ಮ ಅಶಯ..

The post ಸ್ಯಾಂಡಲ್​ವುಡ್​ನಲ್ಲಿ ಈಗ ಹೊಸ ಕಳೆ.. ಸ್ಟಾರ್ಟ್ ಆಯ್ತು ಕಬ್ಜ ಶೂಟಿಂಗ್​ appeared first on News First Kannada.

Source: newsfirstlive.com

Source link