ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆದ ಥ್ರಿಬಲ್ ಆರ್ ಜುಗಲ್​​​ಬಂದಿ..!


ಸ್ಯಾಂಡಲ್​ವುಡ್​ನಲ್ಲಿ ಸದ್ಯ ಕನ್ನಡದ ಥ್ರಿಬರ್​ ಆರ್​ ಜುಗಲ್​ಬಂದಿ ಸಖತ್​ ಸೌಂಡ್​ ಮಾಡ್ತಿದೆ. ಥ್ರಿಬಲ್​ ಅರ್​ ಅಂದ್ರೆ ಟಾಲಿವುಡ್​ನ ರಾಜ್​ ಮೌಳಿ ನಿರ್ದೇಶದ ಸಿನಿಮಾ ಅಲ್ಲ. ಬದಲಿಗೆ ನಮ್ಮ ಚೆಂದದ ಚಂದನವನದ ಪ್ರತಿಭಾವಂತರಾಧ ರಿಷಬ್​ ಶೆಟ್ಟಿ, ರಾಜ್​ ಬಿ ಶೆಟ್ಟಿ, ಹಾಗೂ ರಕ್ಷೀತ್​ ಶೆಟ್ಟಿ.. ಈ ತ್ರಿಮೂರ್ತಿಗಳು ಈಗಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಒಂದಾಗಿದ್ದು, ಈಗ ಗರುಡ ಗಮನ ವೃಷಭ ವಾಹನದ ಹಾಡು ಮತ್ತು ಮೆಕಿಂಗ್​ ಟಾಕ್​ ಆಪ್​ ದಿ ಟೌನ್​ ಆಗಿದೆ.

ಗರುಡ ಗಮನ ವೃಷಭ ವಾಹನ ಟೈಟಲ್​ ನಿಂದಲೇ ಸಖತ್ ಸದ್ದು ಮಾಡ್ತಿರುವ ಚಿತ್ರ.. ರಾಜ್​ ಬಿ ಶೆಟ್ಟಿ ಹಾಗೂ ರಕ್ಷಿತ್​ ಶೆಟ್ಟಿ ಕಾಂಬೋದಲ್ಲಿ ಈ ಚಿತ್ರ ಅರಳಿತ್ತು.. ಇನ್ನು ಸಿನಿಮಾವನ್ನು ಪ್ರೇಕ್ಷಕರ ಅಂಗಳಕ್ಕೆ ತಲುಪಿಸುವ ಜವಬ್ದಾರಿಯನ್ನು ಸಿಂಪಲ್​ ಸ್ಟಾರ್​ ರಕ್ಷೀತ್​ ಶೆಟ್ಟಿ ವಹಿಸಿಕೊಂಡು, ಗರುಡ ಗಮನ ವೃಷಭ ವಾಹನ ತಂಡದ ಜೊತೆ ಕೈ ಜೋಡಿಸಿದ್ರು..ಯಾವಾಗ ಈ ಮೂರು ಜನ ಒಂದಾದ್ರೋ ಅವಾಗಲೇ ಈ ಚಿತ್ರದ ಸಿನಿರಸಿಕರಲ್ಲಿ ಕುತೂಗಲ ಮೂಡಿತ್ತು.

ಪ್ರೇಕ್ಷಕ ಮಹಾಶಯರಲ್ಲಿ ಮೂಡಿದ ಈ ಕುತೂಹಲ ನಿರೀಕ್ಷೆಯನ್ನು ಹುಸಿ ಮಾಡದ ಈ ಥ್ರಿಬಲ್​ ಆರ್​ ಜೋಡಿ ಈಗ ಚಿತ್ರದ ಹಾಡು ಹಾಗೂ ಮೇಕಿಂಗ್​ನಿಂದಲೇ ಕುತೂಹಲ ತಣಿಸಿದ್ದಾರೆ.. ಅಷ್ಟೇ ಈ ಸಿನಿಮಾ ನೋಡಲೇ ಬೇಕು ಅನ್ನೊ ಕಾತರವನ್ನು ಚಿತ್ರಪ್ರೇಮಿಗಳಲ್ಲಿ ಹೆಚ್ಚಿಸಿದ್ದಾರೆ.

ಗರುಡ ಗಮನ ವೃಷಭ ವಾಹನ ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್​ ಆಗ್ತಿದೆ. ಈಗಾಗಲೇ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿರುವ ಶೆಟ್ಟರ ಬಳಗ ಚಿತ್ರದ ಮೇಕಿಂಗ್​ ಹಾಗೂ ಒಂದು ಹಾಡನ್ನು ರಿಲೀಸ್​ ಮಾಡಿ. ಈ ಚಿತ್ರವನ್ನು ಯಾಕೇ ನೋಡಬೇಕು ಅನ್ನೋದಕ್ಕೆ ಕಾರಣ ಕೊಟ್ಟಿದ್ದಾರೆ.. ಚಿತ್ರದ ಮೆಕಿಂಗ್ ನೋಡಿದ್ರೆ ಈ ಸಿನಿಮಾ ನೋಡೊಕೆ ಅವರ ವಾಹನ ಏರಿ ಥಿಯೆಟರ್​ ಕಡೆ ಹೋಗೊದಂತು ಗ್ಯಾರಂಟಿ.

ಅದೇನೆ ಇರಲಿ ಪ್ರತಿ ಸಲ ಸ್ಟ್ರಾಂಗ್​ ಕಂಟೆಂಟ್​ ಮೂಲಕ ಬರುವ ಶೆಟ್ರು ಬಳಗ. ಈಗ ಮತ್ತೆ ಅಂತದೇ ಸರಕನ್ನು ತೆರೆ ಮೇಲೆ ಕಟ್ಟಿ ಕೊಂಡು ಸಿನಿರಸಿಕರಿಗೆ ಮನರಂಜನೆಯ ಹಬ್ಬದೂಟ ಬಡಿಸಲು ಸಿದ್ದವಾಗಿದ್ದು,, ಕನ್ನಡದ ಈ ಥ್ರಿಬಲ್​ ಅರ್​ ಜೋಡಿಯ ಕೆಲಸವನ್ನು ಕನ್ನಡಿಗರು ಯಾವ ರೀತಿ ರಿಸೀವ್​ ಮಾಡ್ತಾರೆ ಕಾಡು ನೋಡಬೇಕು.

News First Live Kannada


Leave a Reply

Your email address will not be published. Required fields are marked *