ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ನಿಧನರಾಗಿದ್ದಾರೆ. 66 ವರ್ಷದ ಸುರೇಖಾ ಅವರಿಗೆ ಕಳೆದ ರಾತ್ರಿ ಹೃದಯಾಘಾತ ಉಂಟಾಗಿತ್ತು. ಕೂಡಲೇ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಸುರೇಖಾ ನೃತ್ಯ ಕಲಾವಿದೆ ಕೂಡ ಆಗಿದ್ರಿಂದ ಆಗಾಗ ಮಂಡಿ ನೋವು ಬರ್ತಿತ್ತು. ಟಿ.ವಿ ನೋಡುತ್ತಾ ಚೆನ್ನಾಗಿಯೇ ಇದ್ರು. ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಕೊನೆಯುಸಿರಳೆದಿದ್ದಾರೆ ಅಂತ ಕುಟುಂಬಸ್ಥರು ತಿಳಿಸಿದ್ದಾರೆ.

ವರನಟ ಡಾ. ರಾಜ್​​ಕುಮಾರ್ ಸೇರಿದಂತೆ ಹಲವು ನಟರ ಜೊತೆ ಸುರೇಖಾ ನಟಿಸಿದ್ದರು. ಮಣ್ಣಿನ ಮಕ್ಕಳು, ಬಿಳಿಗಿರಿ ಬನದಲ್ಲಿ ಸೇರಿದಂತೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವರಿಗೆ ವಿವಾಹವಾಗಿರಲಿಲ್ಲ. ಸಹೋದರಿಯರಾದ ಶಾರದಾ ಹಾಗೂ ಪ್ರೇಮ ಅವರನ್ನ ಸುರೇಖಾ ಅಗಲಿದ್ದಾರೆ. ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

 

The post ಸ್ಯಾಂಡಲ್​ವುಡ್​ನ ಹಿರಿಯ ನಟಿ ಸುರೇಖಾ ವಿಧಿವಶ appeared first on News First Kannada.

Source: newsfirstlive.com

Source link