ಸ್ಯಾಂಡಲ್​ವುಡ್​ ಪದ್ಮಾವತಿಗೆ ಹುಟ್ಟು ಹಬ್ಬ ಸಂಭ್ರಮ; ರಮ್ಯಾ ಬರ್ತ್​​ಡೇಗೆ ನೀವು ವಿಶ್ ಮಾಡಿದ್ರಾ?


ಸ್ಯಾಡಲ್​​ವುಡ್​ನ ಮೋಸ್ಟ್​ ಬ್ಯೂಟಿಫುಲ್​ ನಟಿ ಮೋಹಕ ತಾರೆ ರಮ್ಯಾಗೆ ಇಂದು 39 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್ ಜೊತೆ ”ಅಭಿ” ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟ ರಮ್ಯಾ ನಂತರ ”ಎಕ್ಸ್​ ಕ್ಯೂಸ್​ ಮಿ”, ”ರಂಗ ಎಸ್​ ಎಸ್​ ಎಲ್”​ ಸಿನಿಮಾಗಳ ಮೂಲಕ ಮೋಹಕ ತಾರೆ ಎನಿಸಿಕೊಂಡ್ರು.

ಇದನ್ನೂ ಓದಿ:‘ಅಪ್ಪು’ರನ್ನು ನಮ್ಮಲ್ಲಿ ಜೀವಂತವಾಗಿಡಲು ಒಂದು ಮಾರ್ಗವಿದೆ- ಅಭಿಮಾನಿಗಳಿಗೆ ರಮ್ಯಾ ಸಂದೇಶ

ಸಿನಿಮಾದಿಂದ ದೂರಾದ ರಮ್ಯ ರಾಜಕೀಯದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ರು. ಇನ್ನು ರಮ್ಯಾ ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ ಅಂದ್ರೆ ಅದು ”ನಾಗರಹಾವು”. ಈ ಚಿತ್ರದ ನಂತರ ಸಾಕಷ್ಟು ಅವಕಾಶಗಳು ರಮ್ಯಾಗೆ ಬಂದಿದ್ರು ರಮ್ಯಾ ನಿರಾಕರಿಸಿದ್ರು.

ಇದನ್ನೂ ಓದಿ:ತಮಿಳು ನಟ ಸೂರ್ಯ ಪರ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಬ್ಯಾಟಿಂಗ್

ಪುನಃ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದ ರಮ್ಯ, ಮತ್ತೆ ನಾನು ಸ್ಯಾಂಡಲ್​ವುಡ್​ಗೆ ಎಂಟ್ರಿಕೊಡುವುದಾದರೆ ಅದು ”ಅಪ್ಪು” ಜೊತೆ ಮಾತ್ರ ಅಂತ ಹೇಳೀದ್ದರು. ಆದರೆ ರಮ್ಯಾ ಅವರ ಆಸೆ ಅಸೆಯಾಗೇ ಉಳಿಯಿತು. ಸದ್ಯ ರಮ್ಯಾ ಸಿನಿಮಾರಂಗ ಮತ್ತು ರಾಜಕೀಯದಿಂದ ನಿವೃತ್ತಿ ಪಡೆದು ಆರಾಮಾಗಿದ್ದಾರೆ.

ಇದನ್ನೂ ಓದಿ:ಅಪ್ಪು ಜೊತೆ ಜೇಮ್ಸ್ ಮತ್ತು ದ್ವಿತ್ವದಲ್ಲಿ ನಟಿಸಬೇಕಿತ್ತು.. ಆದರೆ- ರಮ್ಯಾ ಹೇಳಿದ್ದೇನು..?

 

News First Live Kannada


Leave a Reply

Your email address will not be published. Required fields are marked *