ಬುಲ್ ಬುಲ್ ರಚಿತಾ ರಾಮ್ ಅಂದ್ರೆ ಅಭಿಮಾನಿಗಳಿಂದ ಹಿಡಿದು ಸ್ಯಾಂಡಲ್​ವುಡ್ ಮಂದಿಯ ತನಕ ಅಚ್ಚು ಮೆಚ್ಚು. ಆದರೆ ರಚ್ಚುಗೆ ಕಪ್ಪು ಕಲರ್ ಅಂದ್ರೆ ಬಲು ಅಚ್ಚು ಮೆಚ್ಚು.

ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯೋ ಬ್ಯುಸಿ. ಕನ್ನಡದ ಜೊತೆಗೆ ತೆಲುಗು ಚಿತ್ರರಂಗಕ್ಕೂ ಬಲಗಾಲಿಟ್ಟು ಬಂದಿದ್ದಾರೆ. ಲಾಕ್ ಡೌನ್ ಗಳಾಗದೇ ಇದ್ದಿದ್ರೇ ಇಷ್ಟೊತ್ತಗಾಗಲೇ ತಿಂಗಳಿಗೊಮ್ಮೆ ಹೊಸ ಹೊಸ ಸಿನಿಮಾಗಳ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಚಿತ್ತಾರವಾಗುತ್ತಾ ರಂಜನೆ ಚಮತ್ಕಾರವನ್ನ ನೀಡುತ್ತಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ರಚಿತಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅಂದದ ಫೋಟೋಸ್​​ಗಳನ್ನ ತೆಲಿ ಬಿಡುತ್ತಾ ಅಭಿಮಾನಿಗಳ ಕಣ್ಣುಗುಡ್ಡೆಯನ್ನ ಮೇಲೆ ಕೆಳಿಗೆ ಆಡಿಸೋ ಎಕ್ಸ್​ಸೈಜ್ ಕೊಡ್ತಾರೆ. ಈ ಬಾರಿ ಒಂದು ಸ್ಟೇಟ್ ಮೆಂಟ್ ಸಮೇತ ಕಳ್ಳ ನೋಟದ ಫೋಟೋವನ್ನ ಹೊರಬಿಟ್ಟಿದ್ದಾರೆ.. ಆ ಸ್ಟೇಟ್ ಮೆಂಟ್ ಏನಪ್ಪ ಅಂದ್ರೆ ಲವ್ ಫಾರ್ ಬ್ಲಾಕ್ ನೆವರ್ ಎಂಡ್ಸ್​​​..
ಕಲರ್ ಕಲರ್ ಕಾಸ್ಟ್​​ಟ್ಯೂಮ್ಸ್​​ನಲ್ಲಿ ಮಿಂಚೋ ರಚ್ಚುಗೆ ಕಪ್ಪು ಬಣ್ಣ ಅಂದ್ರೆ ಬಲು ಪ್ರೀತಿಯೆಂತೆ. ಈ ಕಾರಣಕ್ಕೆ ರಥಾವರ, ಅಂಬರೀಶ, ಚಕ್ರವ್ಯೂಹ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಭರ್ಜರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಪ್ಪು ಬಟ್ಟೆಯನ್ನ ತೊಟ್ಟು ಚಿಟ್ಟೆಯಂತೆ ಹಾರಿದ್ದಾರೆ ರನ್ನನ ಥಿಥಲಿ.

ರಚಿತಾಗೆ ಕಪ್ಪೆಂದ್ರೆ ಇಷ್ಟ.. ಆದ್ರೆ ಸಿನಿಮಾದಲ್ಲಿ ಕಪ್ಪು ಬಣ್ಣದ ಡ್ರೆಸ್​ಗಳನ್ನ ಹಾಕೋದು ಅವರ ಇಚ್ಛೆಯಲ್ಲ. ಆದ್ರೂ ಕಪ್ಪು ಬಣ್ಣದ ಬಟ್ಟೇಯಲ್ಲಿ ರಚ್ಚು ಎಲ್ಲರಿಗೂ ಮೆಚ್ಚು ಆಗೋಹಾಗೆ ಕಾಣೋದಂತು ಸತ್ಯ. ಕಪ್ಪು ಬಣ್ಣ ಪಂಕಜ ಕಸ್ತೂರಿಗೆ ಇಷ್ಟವಾಗುತ್ತೆ ನಿತ್ಯ.

The post ಸ್ಯಾಂಡಲ್​ವುಡ್ ಡಿಂಪಲ್​ ಕ್ವೀನ್​ ರಚ್ಚುಗ್ಯಾಕೆ ಕಪ್ಪು ಬಣ್ಣ ಅಚ್ಚು ಮೆಚ್ಚು..? appeared first on News First Kannada.

Source: newsfirstlive.com

Source link