ಬೆಂಗಳೂರು: ನಿಮಿಶಾಂಬ ಪ್ರೊಡಕ್ಷನ್ಸ್ ನ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಮೃತಪಟ್ಟಿದ್ದಾರೆ.

23 ದಿನಗಳ ಹಿಂದೆ ಚಂದ್ರಶೇಖರ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಹೀಗಾಗಿ ಅವರನ್ನು ಮಣಿಪಾಲ್ ಸೆಂಟರ್ ಗೆ ದಾಖಲು ಮಾಡಲಾಗಿತ್ತು. ಕೋವಿಡ್ ವಾಸಿಯಾಗಿತ್ತಾದ್ರೂ, ಇದ್ದಕ್ಕಿದ್ದಂತೆ ಶ್ವಾಸಕೋಶದಲ್ಲಿ ಉಲ್ಬಣಗೊಂಡು ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.

ಚಂದ್ರಶೇಖರ್ ಅವರು ಇತ್ತೀಚೆಗಷ್ಟೇ ಮಂಜಿಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರೊಂದಿಗೆ ಸಿನಿಮಾವೊಂದನ್ನ ಅನೌನ್ಸ್ ಮಾಡಿದ್ರು. ಆದರೆ ವಿಧಿಯಾಟ ಬೇರೆನೇ ಆಗಿದೆ. ಈ ಮೂಲಕ ಇತ್ತೀಚೆಗಷ್ಟೇ ಕೋವಿಡ್ ಗೆ ಬಲಿಯಾದ ಕೋಟಿ ನಿರ್ಮಾಪಕ ರಾಮು ಅವರ ಜೊತೆಗೆ ಉದ್ಯಮ ಮತ್ತೊಂದು ಅನ್ನದಾತನ್ನ ಕಳೆದುಕೊಂಡಂತಾಗಿದೆ.

The post ಸ್ಯಾಂಡಲ್‍ವುಡ್‍ಗೆ ಮತ್ತೊಂದು ಆಘಾತ – ಹಿರಿಯ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ appeared first on Public TV.

Source: publictv.in

Source link