ಬೆಂಗಳೂರು: ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕ  ಡಾ.ಕಿರಣ್ ಅವರ ಸ್ಟುಡಿಯೋಗೆ ಕಳ್ಳರು ನುಗ್ಗಿದ್ದು ಸುಮಾರು 35 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿರುವ ಘಟನೆ ಬೆಂಗಳೂರಿನ ತಲಘಟ್ಟಪುರ ಠಾಣಾ ವ್ಯಾಪ್ತಿಯ ಕರಿಯಣ್ಣನ ಪಾಳ್ಯದಲ್ಲಿ ನಡೆದಿದೆ.

ಉಪೇಂದ್ರ ಅಭಿನಯದ "ಐ ಲವ್ ಯು" ಚಿತ್ರದ ಸಂಗೀತ ನಿರ್ದೇಶಕರಾಗಿದ್ದ ಕಿರಣ್ ಅವರಿಗೆ ಸೇರಿದ್ದ ಸ್ಟುಡಿಯೋದಲ್ಲಿ ಕಳ್ಳತನವಾಗಿದೆ.

ನಿನ್ನೆ ತಡರಾತ್ರಿ ಯಾರೂ ಇಲ್ಲದ ವೇಳೆಯಲ್ಲಿ ಕಿಟಕಿ ಕೊರೆದು ಒಳ ನುಗ್ಗಿದ ಕಳ್ಳರು ಹಲವಾರು ಬೆಲೆ ಬಾಳುವ ಸಂಗೀತ ಉಪಕರಣಗಳನ್ನು ಹೊತ್ತೊಯ್ದಿದ್ದಾರೆ.

ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More