ಬಳ್ಳಾರಿ: ಜಿಲ್ಲೆಯಲ್ಲಿ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.ಅಲ್ಲಿ ನಡೆಯೋ ಮರಳು ಮಾಫಿಯಾಕ್ಕೆ ಜನ ಪ್ರತಿನಿಧಿಗಳೇ ಬೆಂಗಾವಲು. ಅಕ್ರಮ ತಡೆಯಬೇಕಿದ್ದ ಪೊಲೀಸರೇ ಮರಳು ಮಾಫಿಯಾಗೆ ಕೈಜೋಡಿಸಿದ್ದಾರೆ. ಅಲ್ಲಿನ ಸ್ಯಾಂಡ್ ಮಾಫಿಯಾ ಅಧಿಕಾರಿಗಳನ್ನ ಬಲಿ ಪಡೆಯೋ ಹಂತಕ್ಕೆ ಬೆಳೆದು ಬಿಟ್ಟಿದೆ.ಮರಳು ಮಾಫಿಯಾ ತಡೆಯಲು ಹೋದ ಅಧಿಕಾರಿ ಮೇಲೆ ಗ್ಯಾಂಗ್ ತಲ್ವಾರ್ ನಿಂದ ಹಲ್ಲೆ ಮಾಡಿದೆ.
ಪ್ರಭಾರ ಕಂದಾಯ ನೀರಿಕ್ಷಕ ವೆಂಕಟಸ್ವಾಮಿ ನಿನ್ನೆ ಬಳ್ಳಾರಿ ತಾಲೂಕಿನ ತೋಳಮಾಮಿಡಿ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಸೀಜ್ ಮಾಡಿದ್ರು.ಇಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರೋ ಸಂಗತಿ,.ಆದ್ರೆ ಯಾರೂ ಕೂಡಾ ಸ್ಯಾಂಡ್ ಮಾಫಿಯಾ ತಡೆಯೋಕೆ ಹೋಗಿಲ್ಲ.ಹೀಗಿದ್ದಾಗ ವೆಂಕಟಸ್ವಾಮಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಸೀಜ್ ಮಾಡಿದ್ರು.ಯಾವಾಗ ವೆಂಕಟಸ್ವಾಮಿ ಟ್ರ್ಯಾಕ್ಟರ್ ಸೀಜ್ ಮಾಡಿದ್ರು,ಮರಳು ಲೂಟಿ ಗ್ಯಾಂಗ್ ನಿನ್ನೆ ಸಂಜೆ ಬಳ್ಳಾರಿಯ ಮಿಲ್ಲರ್ ಪೇಟೆ ವೆಂಕಟಸ್ವಾಮಿ ನಿವಾಸಕ್ಕೆ ನುಗ್ಗಿ ಹಲ್ಲೆ ಮಾಡಿದೆ.
ಹತ್ತಕ್ಕೂ ಹೆಚ್ಚು ಜನರ ಗ್ಯಾಂಗ್ ತಲ್ವಾರ್ ನಿಂದ ವೆಂಕಟಸ್ವಾಮಿ ಹಾಗೂ ಆತನ ಪತ್ನಿ ಸರಸ್ವತಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡಿದೆ ತಲ್ವಾರ್ ನಿಂದ ಎಲ್ಲೆಂದರಲ್ಲಿ ಹಲ್ಲೆ ಮಾಡಿದ್ದು,ವೆಂಕಟಸ್ವಾಮಿ ಹಾಗೂ ಸರಸ್ವತಿಗೆ ಗಂಭೀರ ಗಾಯಗಳಾಗಿದ್ದು,ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ 18 ಜನರ ವಿರುದ್ದ ದೂರು ದಾಖಲಾಗಿದ್ದು ಇಗಾಗಲೇ ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನು ಯಾವಾಗ ಅಧಿಕಾರಿಗೆ ರಕ್ಷಣೆ ಇಲ್ಲದಂತಾಯ್ತೋ ನೌಕರ ಸಂಘಟನೆಗಳು ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಪ್ರಭಾರ ಕಂದಾಯ ನೀರಿಕ್ಷಕರ ಮೇಲೆ ಹಲ್ಲೆ ಮಾಡಿದ ಗ್ಯಾಂಗ್ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಮರಳು ಮಾಫಿಯಾ ತಡೆಯಲು ಹೋದ ಅಧಿಕಾರಿಗೆ ಇಂತಹ ಗತಿ ಯಾದ್ರೆ ಜನ ಸಮಾನ್ಯರ ಪಾಡೇನು ಅನ್ನೋ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.ಹಲ್ಲೆಗೊಳಗಾದ ವೆಂಕಟಸ್ವಾಮಿ ಒಳ್ಳೆ ಅಧಿಕಾರಿಯಾಗಿದ್ರು,ಅವರ ಮೇಲೆ ಹಲ್ಲೆ ಮಾಡಿದ್ದು ಅನ್ಯಾಯ ಅನ್ನೋದು ಸ್ಥಳೀಯರ ಮಾತು.