ಸ್ಯಾನಿಟೈಸರ್ ಕುಡಿದು ವಿಧಾನಸೌಧದಲ್ಲಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ..


ಬೆಂಗಳೂರು: ವ್ಯಕ್ತಿಯೋರ್ವ ವಿಧಾನಸೌಧದಲ್ಲಿಯೇ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು 50 ವರ್ಷದ ನಂದಕುಮಾರ್ ಎಂದು ಗುರುತಿಸಲಾಗಿದ್ದು, ವಿಧಾನಸೌಧರ 2ನೇ ಮಹಡಿಯ ಪ್ರವೇಶ ದ್ವಾರದಲ್ಲಿಯೇ ಘಟನೆ ನಡೆದಿದೆ.

ಆರ್​​ಟಿ ನಗರ ಮೂಲದ ವ್ಯಕ್ತಿಯಾಗಿರೋ ನಂದಕುಮಾರ್ ಮದ್ಯಪಾನ ಮಾಡಿ ಸ್ಯಾನಿಟೈಸರ್ ಕುಡಿದು ಆತ್ನಹತ್ಯೆಗೆ ಯತ್ನಿಸಿದ್ದು, ಆ ಬಳಿಕ ಆತನೇ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಕೂಡಲೇ ಎಚ್ಚೆತ್ತ ವಿಧಾನಸೌಧ ಠಾಣಾ ಪೊಲೀಸರು ನಂದಕುಮಾರ್​ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ನಂದಕುಮಾರ್​ ಪ್ರಾಣಾಪಾಯದಿಂದ ಪಾರಾಗಿದ್ದು, ಕೌಟುಂಬಿಕ ಸಮಸ್ಯೆ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

News First Live Kannada


Leave a Reply

Your email address will not be published. Required fields are marked *