ಪುಣೆ: ಇಲ್ಲಿನ ಸ್ಯಾನಿಟೈಸರ್ ತಯಾರಿಕಾ ಕಂಪನಿಯಲ್ಲಿ ಬೆಂಕಿ ಅವಘಡ ಸಂಭವಿಸಿ 7 ಮಂದಿ ಸಾವನ್ನಪ್ಪಿರುವ ದುರ್ಘಟನೆ ಇಂದು ಸಂಜೆ ನಡೆದಿದೆ.

ಕಂಪನಿಯಲ್ಲಿ ಸುಮಾರು 37 ಮಂದಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ 20 ಮಂದಿಯನ್ನ ರಕ್ಷಣೆ ಮಾಡಿದೆ. 10 ಕಾರ್ಮಿಕರು ಮಿಸ್ಸಿಂಗ್ ಆಗಿದ್ದಾರೆ ಅಂತಾ ವರದಿಯಾಗಿದೆ.

ಇನ್ನು ದುರ್ಘಟನೆಯಲ್ಲಿ ಗಾಯಗೊಂಡಿರುವ ನೌಕರರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಅಗ್ನಿಶಾಮಕ ತಂಡದಿಂದ ನಾಪತ್ತೆಯಾದವರ ಹುಡುಕಾಟ ಮುಂದುವರಿದಿದೆ.

The post ಸ್ಯಾನಿಟೈಸರ್ ಘಟಕದಲ್ಲಿ ಅಗ್ನಿ ದುರಂತ: 7 ಮಂದಿ ದುರ್ಮರಣ, 10 ಕಾರ್ಮಿಕರು ಮಿಸ್ಸಿಂಗ್ appeared first on News First Kannada.

Source: newsfirstlive.com

Source link