ಸ್ಯಾಮ್‌ ಸಂಗ್‌, ಹಲವು ಗ್ರಾಹಕರ ಮೆಚ್ಚಿನ ಬ್ರಾಂಡ್‌ ಆಗಿದೆ. ಮಿತವ್ಯಯದ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‌ ಇರುವ ಅನೇಕ ಹೊಸ ಬ್ರಾಂಡ್‌ಗಳು ಬಂದರೂ, ನನಗೆ ಸ್ಯಾಮ್‌ ಸಂಗೇ ಬೇಕು ಎನ್ನುವ ಗ್ರಾಹಕರು ಅನೇಕರಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ, ಸ್ಯಾಮ್‌ ಸಂಗ್‌ ಮೊಬೈಲ್‌ಗ‌ಳ ದರ ಸ್ವಲ್ಪ ಜಾಸ್ತಿ ಇರುತ್ತದೆ. ಆದರೂ, ಆ ಬ್ರಾಂಡ್‌ ಗಳಿಗೆ ಹೊಂದಿಕೊಂಡ ಗ್ರಾಹಕರು, ಬೆಲೆ ಹೆಚ್ಚಾದರೂಪರವಾಗಿಲ್ಲ ನಮಗೆ ಅದೇ ಬೇಕು ಎನ್ನುತ್ತಾರೆ. ಇಂತಿಪ್ಪ ಸ್ಯಾಮ್‌ ಸಂಗ್‌, ಈಗ ಭಾರತದಲ್ಲಿ ಹೊಸದೊಂದು ಫೋನ್‌ ಬಿಡುಗಡೆ ಮಾಡಿದೆ. ಅದುವೇ ಗೆಲಾಕ್ಸಿ ಎ52. ಇದರ ದರ 128 ಜಿಬಿ ಆಂತರಿಕ ಸಂಗ್ರಹ, 6 ಜಿಬಿ ರ್ಯಾಮ್‌ 26,500 ರೂ. ಇದ್ದರೆ, 128 ಜಿಬಿ ಆಂತರಿಕ ಸಂಗ್ರಹ, 8 ಜಿಬಿ ರ್ಯಾಮ್‌ ಆವೃತ್ತಿಗೆ 28000 ರೂ. ಇದೆ. ಈ ಹೊಸ ಫೋನಿನಲ್ಲಿರುವ ಅಂಶಗಳೇನು? ನೋಡೋಣ.

ಪರದೆ: ಇದು 6.5 ಇಂಚಿನ ಪರದೆ ಹೊಂದಿದೆ. ಪರದೆಯ ಮೇಲ್ಭಾಗದಲ್ಲಿ, ಮಧ್ಯದಲ್ಲಿ ಸೆಲ್ಫಿ ಕ್ಯಾಮೆರಾದ ಪಂಚ್‌ ಹೋಲ್‌ ಹೊಂದಿದೆ. ಫ‌ುಲ್‌ ಎಚ್‌ಡಿ ಫ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ ಪ್ಲೇ ಅಳವಡಿಸಲಾಗಿದೆ. ಮೊದಲೇ ಅನೇಕ ಬಾರಿ ತಿಳಿಸಿದಂತೆ ಅಮೋಲೆಡ್‌ ಡಿಸ್‌ ಪ್ಲೇಯಲ್ಲಿ ಚಿತ್ರಗಳು, ವಿಡಿಯೊಗಳು, ಮೊಬೈಲ್‌ನ ಯುಐ ಎಲ್ಲ ಬಹಳ ಚೆನ್ನಾಗಿ ಕಾಣುತ್ತದೆ ‌ . ಎಲ್ಸಿಡಿ ಡಿಸ್‌ ಪ್ಲೇಗಿಂತಅಮೋಲೆಡ್‌ ಡಿಸ್ಪ್ಲೇ ಕಡಿಮೆ ಬ್ಯಾಟರಿಬಳಸುತ್ತದೆ. ‌ ಹಾಗಾಗಿ ಡಿಸ್‌ ಪ್ಲೇ ವಿಷಯದಲ್ಲಿ ಉತ್ತಮ ಅಂಕ ನೀಡಲಡ್ಡಿಯಿಲ್ಲ. ಹಾಗೆಯೇ ಸ್ಯಾಮ್‌ಸಂಗ್‌ ಇದರಲ್ಲಿ 90 ಹರ್ಟ್ಸ್ ಸ್ಕ್ರೀನ್‌ ರಿಫ್ರೆಶ್‌ ರೇಟ್‌ಸವಲತ್ತು ನೀಡಿದೆ. ಹೀಗಾಗಿ ಪರದೆಯನ್ನು ಮೇಲೆ ಕೆಳಗೆ ಸ್ಕ್ರಾಲ್‌ ಮಾಡಿದಾಗ ಅಥವಾಗೇಮ್‌ಗಳನ್ನು ಆಡುವಾಗಬಹಳ ಮೃದುವಾಗಿ ಚಲಿಸುತ್ತದೆ.

ವಿನ್ಯಾಸ: ಬಾಕ್ಸ್ ನಿಂದ ಫೋನನ್ನು ತೆರೆದು ಕೈಯಲ್ಲಿ ಹಿಡಿದರೆಹಿಂದಿಗಿಂತ ಪೂರ್ತಿ ಭಿನ್ನವಾದಸ್ಯಾಮ್‌ ಸಂಗ್‌ ಮಿಡ್ಲ್ ರೇಂಜ್‌ ಮೊಬೈಲನ್ನು ಸ್ಪರ್ಶಿಸಿದಂತಾಗುತ್ತದೆ. ಸ್ಲಿಮ್‌ ಆಗಿದೆ. ನಾಲ್ಕು ಮೂಲೆಯ ಅಂಚುಗಳು ಹೆಚ್ಚು ರೌಂಡ್‌ ಶೇಪ್‌ ಇಲ್ಲದೇ, ಫೋನಿನ ಅಂದ ಹೆಚ್ಚಿಸುತ್ತದೆ. ಫೋನಿನ ಮೇಲ್ಭಾಗದಲ್ಲಿ ಸಿಮ್‌ ಟ್ರೇ ಇದೆ. ಇದರಲ್ಲಿ ಎರಡು ಸಿಮ್‌ ಕಾರ್ಡ್‌ ಅಥವಾ ಒಂದು ಸಿಮ್‌ ಬಳಸಿ ಇನ್ನೊಂದು ಎಸ್‌ಡಿ ಕಾರ್ಡ್‌ ಹಾಕಿಕೊಳ್ಳ ಬಹುದು. ಫೋನಿನ ಕೆಳಭಾಗದಲ್ಲಿ 3.5 ಎಂ.ಎಂ. ಆಡಿಯೊ ಜಾಕ್‌, ಯುಎಸ್ಬಿ ಟೈಪ್‌ ಸಿ ಪೋರ್ಸ್, ಅದರ ಪಕ್ಕದಲ್ಲಿ ಆಡಿಯೋ ಸ್ಪೀಕರ್‌ ಇದೆ. ಎಡಭಾಗದಲ್ಲಿ ಯಾವುದೇ ಬಟನ್‌ ಇಲ್ಲ. ಬಲಬದಿಯಲ್ಲಿ ಪರ್ವ ಮತ್ತು ಆನ್‌ ಆಫ್ ಬಟನ್‌ ಇದೆ. ಫೋನಿನ ಫ್ರೇಮ್ ಲೋಹದ್ದು, ಹಿಂಭಾಗ ಸಂಪೂರ್ಣ ಪ್ಲಾಸ್ಟಿಕ್‌ ನದು.

ಈ ಫೋನಿನ ಭಿನ್ನತೆ ಅಂದರೆ ಅದರ ಹಿಂಭಾಗದ ಮೆಟಿರಿಯಲ್ ಸಾಮಾನ್ಯವಾಗಿ ಈಗಿನ ಫೋನ್‌ ಗಳಲ್ಲಿ ಹೆಚ್ಚು ಬೆಲೆಯದಾದರೆ ಗ್ಲಾಸಿನ ದೇಹ ಇರುತ್ತದೆ. ಮಧ್ಯಮ ದರ್ಜೆಯಲ್ಲಿ ಗ್ಲಾಸ್ಟಿಕ್‌ ಇರುತ್ತದೆ. ಅಂದರೆ ಪಾಲಿ ಕಾರ್ಬೊನೆಟ್‌ ವಸ್ತುವನ್ನೇ ಬಳಸಿ, ಗಾಜಿನ ರೀತಿಯೇ ಕಾಣುವಂತೆ ವಿನ್ಯಾಸ ಮಾಡಿರುತ್ತಾರೆ. ಆದರೆ, ಈ ಫೋನಿನ ಹಿಂಭಾಗ ಪ್ಲಾಸ್ಟಿಕ್‌ ಎಂಬುದು ಎದ್ದು ಕಾಣುತ್ತದೆ. ಆದರೆ, ಈ ಹೊಸ ವಿನ್ಯಾಸ ನೋಡಲು ಸುಂದರವಾಗಿದೆ. ಈಮ ಪ್ಲಾಸ್ಟಿಕ್‌ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಸುಲಭಕ್ಕೆ ಒಡೆಯುಂಥಲ್ಲ. ‌ ಆದರೆ, ಇದಕ್ಕೆ ಹೆಚ್ಚುವರಿ ಕೇಸ್‌ ಹಾಕಿಕೊಳ್ಳದಿದ್ದರೆ, ಕೆಳಗೆ ಇಟ್ಟು ಇಟ್ಟು ಗೀರುಗಳು ಉಂಟಾಗುತ್ತದೆ.

ಧೂಳು, ನೀರು ನಿರೋಧಕ: ಇನ್ನೊಂದು ವಿಶೇಷವೆಂದರೆ ಇದು ಐಪಿ67 ರೇಟೆಡ್‌ ಆಗಿದೆ. ಅಂದರೆ ಧೂಳು, ಮಣ್ಣಿನ ಕಣ ಒಳ ಹೋಗುವುದಿಲ್ಲ. ಜೊತೆಗೆ ನೀರು ನಿರೋಧಕ ಗುಣವುಳ್ಳದ್ದು. 1 ಮೀಟರ್‌ ಆಳದವರೆಗಿನ ನೀರಿನಲ್ಲಿ 30 ನಿಮಿಷ ಇದ್ದರೂ ನೀರು ಫೋನಿನ ಒಳ ಹೋಗುವುದಿಲ್ಲ. ಆಕಸ್ಮಿಕವಾಗಿ ನೀರು ಅಥವಾ ಮಳೆ ನೀರು ಬಿದ್ದರೆ ಫೋನಿಗೆ ರಕ್ಷಣೆ ಇದೆ.

ಪ್ರೊಸೆಸರ್‌: ಇದರಲ್ಲಿ ಕ್ವಾಲ್‌ಕಾಂ ಸ್ನಾಪ್‌ ಡ್ರಾಗನ್‌ 720 ಜಿ ಪ್ರೊಸೆಸರ್‌ ಇದೆ. 2.30 ಗಿ.ಹ. ವೇಗದ ಪ್ರೊಸೆಸರ್‌ ಇದಾಗಿದೆ. ಮಧ್ಯಮ ವಲಯದ ಮೊಬೈಲ್‌ಗ‌ಳಲ್ಲಿ ಇದೊಂದು ಉತ್ತಮ ಪ್ರೊಸೆಸರಾಗಿದ್ದು, ಫೋನಿನ ವೇಗ, ಕಾರ್ಯನಿರ್ವಹಣೆ ಸುಲಲಿತವಾಗಿದೆ. ಅಂಡ್ರಾಯ್ಡ್ 11 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಇದಕ್ಕೆ ಸ್ಯಾಮ್‌ ಸಂಗ್‌ನ ಒನ್‌ ಯು ಐ ಇಂಟರ್‌ಫೇಸ್‌ ಜೋಡಿಸಲಾಗಿದೆ.

ಕ್ಯಾಮೆರಾ: ಇದರ ಕ್ಯಾಮೆರಾ ವಿಭಾಗ ಉತ್ತಮವಾಗಿದೆ. ಹಿಂಬದಿ 64 ಮೆ.ಪಿ. ಮುಖ್ಯ ಕ್ಯಾಮೆರಾ, 12 ಮೆ.ಪಿ. ಅಲ್ಟ್ರಾವೈಡ್‌, 5 ಮೆ.ಪಿ. ಮ್ಯಾಕ್ರೋ, 5 ಮೆ.ಪಿ. ಡೆಪ್ತ್ ಕ್ಯಾಮೆರಾ ಸೇರಿ ನಾಲ್ಕುಕ್ಯಾಮೆರಾ ಹೊಂದಿದೆ. ಇದಕ ಆ್ಯಪ್ಟಿಕಲ್‌ ಇಮೇಜ್‌ ಸ್ಟೆಬಿಲೈಜೇಷನ್‌ ಸೌಲಭ್ಯ ಇದೆ. ಹೀಗಾಗಿ ಫೋನ್‌ ಕೊಂಚ ಅಲುಗಾಡಿದಾಗಲೂದ್ದಷ್ಟು ಚಿತ್ರಗಳು ಮೂಡುತ್ತವೆ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದೆ. ಸೆಲ್ಫಿಗಾಗಿ 32 ಮೆ.ಪಿ. ಕ್ಯಾಮೆರಾ ನೀಡಿರುವುದು ವಿಶೇಷ.

ಬ್ಯಾಟರಿ: ಇದರಲ್ಲಿ 4500 ಎಂಎಎಚ್‌ ಬ್ಯಾಟರಿ ಇದೆ. ಸ್ಯಾಮ್‌ಸಂಗ್‌ ಫೋನ್‌ ಬಳಸುವವರಿಗೆ ಅದರ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುವುದು ಗೊತ್ತೇ ಇದೆ. ಸಾಧಾರಣ ಬಳಕೆಯಲ್ಲಿ ಒಂದೂವರೆ ದಿನದವರೆಗೂ ಬ್ಯಾಟರಿ ಬರುತ್ತದೆ. ಇದು 25 ವ್ಯಾಟ್ನ ಸೂಪರ್‌ ಫಾಸ್ಟ್ ಚಾರ್ಜರ್‌ ಅನ್ನು ಬೆಂಬಲಿಸುತ್ತದೆ. ಆದರೆ ಇದರ ಬಾಕ್ಸ್ ನಲ್ಲಿ ಕೊಟ್ಟಿರುವುದು 15 ವ್ಯಾಟ್‌ ಚಾರ್ಜರ್‌ ಮಾತ್ರ. ಈ ಫೋನಿನ ಮಾಲೀಕರಿಗೆಬೇಗ ಚಾರ್ಜ್‌ ಆಗಬೇಕೆಂದರೆ 25 ವ್ಯಾಟ್ಸ್‌ ಚಾರ್ಜರನ್ನು ಪ್ರತ್ಯೇಕವಾಗಿಕೊಳ್ಳಬೇಕು.

ಕೊರತೆಗಳು :

ಈ ಫೋನಿಗೆ 28,000 ರೂ. ದರವಿದ್ದರೂ ಇದರಲ್ಲಿ 5ಜಿ ಸೌಲಭ್ಯ ಇಲ್ಲದಿರುವುದು ಮುಖ್ಯ ಕೊರತೆ. ವೇಗದ ಚಾರ್ಜರ್‌ ಪ್ರತ್ಯೇಕವಾಗಿ ಕೊಳ್ಳಬೇಕು. ಇದರಲ್ಲಿರುವುದು ಒಂದೇ ಥೀಮ್‌ ಮತ್ತು ವಾಲ್‌ಪೇಪರ್‌, ಥೀಮ್‌ ಬೇಜಾರಾಗಿ ಬದಲಿಸಬೇಕೆಂದರೆ ಬೇರೆ ಥೀಮ್‌ ಡೌನ್‌ಲೋಡ್‌ ಮಾಡಲು ಹಣ ಕೊಡಬೇಕು.

 

-ಕೆ.ಎಸ್‌. ಬನಶಂಕರ ಆರಾಧ್ಯ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

By

Leave a Reply