ಬೆಂಗಳೂರು: ಕೋವಿಡ್ ಸಂಬಂಧ ಪ್ರಕರಣಗಳ PIL ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಸ್ಲಮ್, ಬಡ ಜನರಿರುವ ಪ್ರದೇಶಗಳಿಗೆ ವ್ಯಾಕ್ಸಿನ್ ನೀಡುವಂತೆ ಆದೇಶ ಹೊರಡಿಸಿದೆ.

ಎನ್​​ಜಿಒಗಳ ಸಹಕಾರ ಪಡೆದು ಪೌರ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಆದ್ಯತಾ ವಲಯಗಳಿಗೆ ವ್ಯಾಕ್ಸಿನ್ ನೀಡಿ. ಇವರ ಕುಟುಂಬದವರಿಗೂ ವ್ಯಾಕ್ಸಿನೇಷನ್​ಗೆ ಕ್ರಮವಹಿಸಿ. ಇದಕ್ಕಾಗಿ ನಡೆಸಿದ ವಿಶೇಷ ಅಭಿಯಾನಗಳ ಮಾಹಿತಿ ನೀಡಿ. ವಿಶೇಷ ಚೇತನರಿಗೆ ವ್ಯಾಕ್ಸಿನೇಷನ್‌ ಬಗ್ಗೆಯೂ ಮಾಹಿತಿ ನೀಡಿ ಎಂದು ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.

The post ಸ್ಲಂ, ಬಡ ಜನರಿರುವ ಪ್ರದೇಶಗಳಿಗೆ ವ್ಯಾಕ್ಸಿನ್ ನೀಡಿ -ಸರ್ಕಾರಕ್ಕೆ ಹೈಕೋರ್ಟ್​ ಆದೇಶ appeared first on News First Kannada.

Source: newsfirstlive.com

Source link