ಉತ್ತರ ಕನ್ನಡ: ಯಲ್ಲಾಪುರದ ಸಮಾಜ ಸೇವಕರೊಬ್ಬರು, ತಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಸರ್ಕಾರಿ ಆಸ್ಪತ್ರೆಗೆ ಅಂದಾಜು 30 ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳನ್ನು ದಾನವಾಗಿ ನೀಡಿ ಮಾದರಿಯಾಗಿದ್ದಾರೆ.

ಸಮಾಜ ಸೇವಕ ಬಾಲಕೃಷ್ಣ ನಾಯಕ್​ ಯಲ್ಲಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವಾರಣದಲ್ಲಿ  ಸುಮಾರು 18 ಲಕ್ಷ ರೂಪಾಯಿ ವೆಚ್ಚದಲ್ಲಿ ವಾಕ್ಸಿನೇಷನ್ ಸೆಂಟರನ್ನ ಉಚಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೇ ಸುಮಾರು 18 ಲಕ್ಷ ರೂಪಾಯಿ ಮೊತ್ತದ ಅಂಬುಲೆನ್ಸ್​​​ ಕೂಡ  ಕೊಡುಗೆಯಾಗಿ ನೀಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದ ಸೇವೆಯನ್ನು ಮಾಡೋ ಮೂಲಕ ಬಾಲಕೃಷ್ಣ ನಾಯಕ್ ಜನರ ಮೆಚ್ಚುಗೆ ಗಳಿಸಿದ್ದಾರೆ. ಬಾಲಕೃಷ್ಣ ಅವರಂತೆಯೇ ಅವರ ಅಣ್ಣ ಸಹ ಗೋವಾದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನ ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಬಿಲ್ಡರ್ ಆಗಿರೋ ಇವರು ತಮ್ಮ ಕೈಲಾದ ಸೇವೆಯನ್ನ ರಾಜ್ಯದ ಜನರಿಗೆ ಮಾಡುತ್ತೇವೆ ಎಂದಿದ್ದಾರೆ.

ಸಾಮಾಜಿಕ ಅಂತರ ಪಾಲನೆಯೊಂದಿಗೆ 18 ವರ್ಷ ಮೇಲ್ಪಟ್ಟವರಿಗೆ ವಾಕ್ಸಿನ್ ನೀಡಲು ಅಗತ್ಯವಿರೋ ಎಲ್ಲಾ ಸೌಕರ್ಯಗಳನ್ನು ವಾಕ್ಸಿನೇಷನ್ ಸೆಂಟರ್ನಲ್ಲಿ ಇಡಲಾಗಿದೆ. ಅದೇ ರೀತಿ ಕೊರೊನಾ ಸೇರಿದಂತೆ ಇತರೆ ಯಾವುದೇ ಸಂದರ್ಭದಲ್ಲಿ ತುರ್ತು ಸೇವೆ ಅಗತ್ಯ ಇದ್ದಲ್ಲಿ ಬೇಕಾಗುತ್ತೆ ಅಂತ ಅಂಬುಲೆನ್ಸ್​ ಕೂಡ ನೀಡಲಾಗಿದ್ದು, ಇತರ ಕ್ಷೇತ್ರಗಳಲ್ಲಿಯೂ ಈ ರೀತಿ ಸಮಾಜ ಸೇವಕರು ಮುಂದೆ ಬಂದು ಜನರ ಅಭಿವೃದ್ಧಿಗೆ ಕೈಜೋಡಿಸೋ ಅಗತ್ಯವಿದೆ ಅನ್ನೋ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

The post ಸ್ವಂತ ಖರ್ಚಿನಲ್ಲಿ ಕೊರೊನಾ ವ್ಯಾಕ್ಸಿನೇಷನ್ ಸೆಂಟರ್ ನಿರ್ಮಿಸಿಕೊಟ್ಟ ಬಿಲ್ಡರ್ appeared first on News First Kannada.

Source: newsfirstlive.com

Source link