ಬೆಂಗಳೂರು: ಲಾಕ್​​ಡೌನ್​ನಿಂದ ಹಲವಾರು ಕೂಲಿ ಕಾರ್ಮಿಕರು, ದಿನದ ಸಂಪಾದನೆಯನ್ನೇ ನಂಬಿಕೊಂಡು ಬದುಕಿದ್ದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಟೈಮಲ್ಲಿ ನಗರ ಪೊಲೀಸರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಕತ್ರಿಗುಪ್ಪೆ, ಬನಶಂಕರಿ. ಚನ್ನಮ್ಮನಕೆರೆ, ಹೊಸಕೆರೆಹಳ್ಳಿ, ಇಟ್ಟಮಡು ಏರಿಯಾ ಜನರಿಗೆ ಪ್ರತಿನಿತ್ಯ ಆರಕ್ಷಕರು ಆಹಾರ ವಿತರಣೆ ಮಾಡ್ತಿದ್ದಾರೆ.

ಚನ್ನಮ್ಮನ ಕೆರೆ ಠಾಣೆ ಪೊಲೀಸರು ಹಸಿದವರ ಹೊಟ್ಟೆ ತುಂಬಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವಂತ ಖರ್ಚಿನಲ್ಲಿ ಪ್ರತಿನಿತ್ಯ ಸಾವಿರ ಜನರಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಕೊಡ್ತಿದ್ದಾರೆ. ಚೆನ್ನಮ್ಮನ ಕೆರೆ ಠಾಣೆ ಇನ್ಸ್​​ಪೆಕ್ಟರ್ ಜನಾರ್ದನ್​​ ಹಾಗೂ ಸಬ್ ಇನ್ಸ್​​ಪೆಕ್ಟರ್ ಮನೋಜ್​​​ರಿಂದ ಈ ಮಾನವೀಯ ಕಾರ್ಯ ನಡೆಯುತ್ತಿದೆ.

ಠಾಣೆ ಆವರಣದಲ್ಲಿ ಊಟ ತಯಾರಿಸಿ ಪ್ರತಿನಿತ್ಯ ಸಾವಿರ ಫುಡ್ ಕಿಟ್​ಗಳನ್ನ ವಿತರಣೆ ಮಾಡ್ತಿದ್ದಾರೆ. ಬಡಜನರು, ನಿರ್ಗತಿಕರು, ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಕೊಡ್ತಿದ್ದಾರೆ. ಇನ್ಸ್​​ಪೆಕ್ಟರ್ ಹಾಗೂ ಸಬ್ ಇನ್ಸ್​​ಪೆಕ್ಟರ್​ ಅವರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮತ್ತು ಏರಿಯಾದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಸ್ವಂತ ಖರ್ಚಿನಲ್ಲಿ, ನಿತ್ಯ ಸಾವಿರ ಜನರಿಗೆ ಊಟ ವಿತರಿಸುತ್ತಿರೋ ಬೆಂಗಳೂರು ಪೊಲೀಸ್​ appeared first on News First Kannada.

Source: newsfirstlive.com

Source link