ಕೊಪ್ಪಳ: ಕೊರೊನಾ ಎರಡನೇ ಅಲೆ ಜನರ ನಿದ್ದೆಗೆಡಿಸಿದೆ, ಕೊರೊನಾ ಸೋಂಕು ಧೃಡವಾದ್ರೆ ಭಯದಿಂದಲೇ ಎಷ್ಟೋ ಜನರು ಮೃತಪಡುತ್ತಿದ್ದಾರೆ. ಸಮಯಕ್ಕೆ ಬೆಡ್, ಆಕ್ಸಿಜನ್ ಹಾಗೂ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ಗಳಿಲ್ಲದೆ‌ ಸಾವನ್ನಪ್ಪುತ್ತಿರುವ ನಿದರ್ಶನಗಳು ನಮ್ಮ ಮುಂದೆ‌ ನಿತ್ಯ ಕಾಣ ಸಿಗುತ್ತಿವೆ. ಆಕ್ಸಿಜನ್, ಬೆಡ್, ಆ್ಯಂಬುಲೆನ್ಸ್ ಸಮಸ್ಯೆ ನೀಗಿಸಲು ಕೆಲ ದಾನಿಗಳು ಮುಂದಾಗುತ್ತಿದ್ದಾರೆ.‌

ಇಂತಹವರ ಸಾಲಿನಲ್ಲಿ ಇದೀಗ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗುರು ಮುಂದಾಗಿದ್ದಾರೆ.
ವೈಯಕ್ತಿಕ ಹಣ ವೆಚ್ಚ ಮಾಡಿ ಬಡವರಿಗಾಗಿ ಎರಡು ಆಂಬ್ಯುಲೆನ್ಸ್ ಖರೀದಿಸಿ ಆರೋಗ್ಯ ಇಲಾಖೆಗೆ ನೀಡಿದ್ದಾರೆ. ಇಂದು ಜಿಲ್ಲೆಯ ಕಾರಟಗಿ ನಗರದ ಶಾಸಕರ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವಾಹನ ಹಸ್ತಾಂತರಿಸಿದ ಶಾಸಕ ದಡೇಸೂಗುರು ಮಾತನಾಡಿ.. ನನ್ನ ಕ್ಷೇತ್ರದ ಜನತೆಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಸರಿಯಾದ ಸಮಯಕ್ಕೆ ಇಂತಹ ಕೊರೊನಾ ಸಂದರ್ಭದಲ್ಲಿ ಆಂಬ್ಯಲೆನ್ಸ್ ಸಿಗಬೇಕು, ಆಸ್ಪತ್ರೆಗೆ ಬೇಗ ತಲುಪಿ ಚಿಕಿತ್ಸೆ ಸಿಗಬೇಕು. ಹಾಗಾಗಿ ಈ ಕಾರ್ಯಕ್ಕೆ ಮುಂದಾಗಿ ಆ್ಯಂಬುಲೆನ್ಸ್ ನೀಡಿದ್ದೇನೆ. ಕ್ಷೇತ್ರದ ಜನರ ಆರೋಗ್ಯ ಸೃಷ್ಟಿಯಿಂದ ಸದಾ ನಾನು ಸಿದ್ಧ ಅಂತಾ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ರಾಘವೇಂದ್ರ, ಕಾರಟಗಿ ತಹಶಿಲ್ದಾರ ಶಿವಶರಣಪ್ಪ ಕಟ್ಟೊಳ್ಳಿ, ಪುರಸಭೆ ಮುಖ್ಯ ಅಧಿಕಾರಿ ರೆಡ್ಡಿ ರಾಯನಗೌಡ, ಪಿಎಸ್ಐ ಲಕ್ಕಪ್ಪ ಅಗ್ನಿ‌ ಸೇರಿದಂತೆ ಇತರರು ಹಾಜರಿದ್ದರು.

The post ಸ್ವಂತ ಹಣದಿಂದ ಆಂಬ್ಯುಲೆನ್ಸ್ ಖರೀದಿಸಿ ಸರ್ಕಾರಕ್ಕೆ ಹಸ್ತಾಂತರಿಸಿದ ಶಾಸಕ ಬಸವರಾಜ ದಡೇಸೂಗುರು appeared first on News First Kannada.

Source: newsfirstlive.com

Source link