ಚಿಕ್ಕಮಗಳೂರು: ನಟ ಸಂಚಾರಿ ವಿಜಯ್ ಪಾರ್ಥಿವ ಶರೀರ ಹುಟ್ಟೂರಾದ ಕಡೂರಿನ ಪಂಚನಹಳ್ಳಿ ತಲುಪಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಸದ್ಯ ಆ್ಯಂಬುಲೆನ್ಸ್​ನಲ್ಲಿ ವಿಜಯ್ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದೆ. ಇತ್ತ ಸಂಸ್ಕಾರ ನಡೆಯುವ ಸ್ಥಳದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತೂಮಕುರಿನ ಶ್ರೀ ಕುಪ್ಪುರು ಗದ್ದುಗೆ ಮಠದ ಡಾ.ಯತೀಶ್ವರ್ ಶಿವಚಾರ್ಯ ಸ್ವಾಮಿ ನೇತೃತ್ವದಲ್ಲಿ ಹಿಂದೂ ಲಿಂಗಾಯತ ಸಂಪ್ರದಾಯ ಪ್ರಕಾರ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗೂ ನಡೆಯುತ್ತಿವೆ.

ಪಂಚನಹಳ್ಳಿಯಲ್ಲಿ ವಿಜಯ್ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. 25 ಜನರಿಗೆ ಮಾತ್ರ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

The post ಸ್ವಗ್ರಾಮ ತಲುಪಿದ ವಿಜಯ್ ಪಾರ್ಥಿವ ಶರೀರ; ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ appeared first on News First Kannada.

Source: newsfirstlive.com

Source link