ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಬಿಜೆಪಿ ಟೀಕೆ ಮುಂದುವರೆದ ವಿಚಾರವಾಗಿ ಮಾತನಾಡಿದ್ದು, ಬಿಜೆಪಿ ಅವರಿಗೆ ಕಾರ್ಯಕ್ರಮದಿಂದ ಭಯ ಬಂದಿದೆ. ಈ ಭಯದಲ್ಲಿಯೇ ಅವರು ಇನ್ನೂ ವ್ಯರ್ಥ ಟೀಕೆಗಳನ್ನು ಮಾಡುತ್ತಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ
ಮೈಸೂರು: ನಾವು ಗೌರವದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಬಿಜೆಪಿಯವರಂತೆ ಹರ್ ಘರ್ ತಿರಂಗಾ ಎಂದು ನಾಟಕ ಮಾಡಲ್ಲ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದರು. ಹರಘರ್ ತಿರಂಗ ಇದು ಬಿಜೆಪಿ ಅವರ ನಾಟಕ. ಬಿಜೆಪಿ ಎಂದೂ ರಾಷ್ಟ್ರದ ಬಾವುಟಕ್ಕೆ ಗೌರವ ಕೊಟ್ಟವರಲ್ಲ. ಅವರು ರಾಷ್ಟ್ರಗೀತೆ, ಬಾವುಟವನ್ನು ವಿರೋಧಿಸುತ್ತಿದ್ದವರು. ಸಾವರ್ಕರ್, ಗೋಳ್ವಾಲ್ಕರ್ ಇವರು ಯಾರಿಗೂ ಬಾವುಟದ ಮೇಲೆ ನಂಬಿಕೆ ಇಲ್ಲ. ಬಿಜೆಪಿ ಸ್ವಾತಂತ್ರ್ಯ ರಾಷ್ಟ್ರ ಮಹೋತ್ಸವನ್ನು ರಾಜಕೀಯಕರಣ ಮಾಡಲು ಮುಂದಾಗುತ್ತಿದೆ. ರಾಷ್ಟ್ರಧ್ವಜವನ್ನು ಖಾದಿ ಅಥವಾ ಸಿಲ್ಕ್ನಲ್ಲಿ ಮಾತ್ರ ಮಾಡಬೇಕು. ಪಾಲಿಸ್ಟರ್ನಲ್ಲಿ ಮಾಡಿ ಚೀನಾಗೆ ಅನುಕೂಲ ಮಾಡುತ್ತಿದ್ದಾರೆ. ಚೀನಾದ ಅಮದು ಹೆಚ್ಚಾಗಿದೆ ಇದರಿಂದ ಮೇಕ್ ಇನ್ ಇಂಡಿಯಾ ಎಲ್ಲಿದೆ ಎಂದು ಪ್ರಶ್ನಿಸಿದರು. ಆತ್ಮ ನಿರ್ಭರ ಭಾರತ ಎಂದರೇನು ಎಂದು ಸಿದ್ದರಾಮಯ್ಯ ಪ್ರಶ್ನಿದರು.