ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಲ್ಯಾಬ್‌ಗಳಲ್ಲಿ 24 ಗಂಟೆಯೊಳಗಾಗಿ ಸ್ವಾಬ್ ಟೆಸ್ಟ್ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲು ಸೂಚನೆ ನೀಡಿದ್ದರೂ, ತಡವಾಗಿ ಮಾಹಿತಿಯನ್ನು ನೀಡುತ್ತಿದ್ದ ಖಾಸಗಿ ಸ್ವಾಬ್​​ ಟೆಸ್ಟ್​ ಲ್ಯಾಬ್​ಗಳಿಗೆ ನೋಟಿಸ್​ ಜಾರಿ ಮಾಡಿರುವ ಅಧಿಕಾರಿಗಳು, ಕೆಲ ಲ್ಯಾಬ್​ಗಳಿಗೆ ಬೀಗ ಮುದ್ರೆ ಹಾಕಿದ್ದಾರೆ.

ಕೊರೊನಾ ಸ್ವಾಬ್​ ಟೆಸ್ಟ್​ಗೆ ಕಳುಹಿಸಲಾದ ಸ್ವಾಬ್​ಗಳನ್ನು ಪರೀಕ್ಷೆ ಮಾಡಿ ಬಳಿ ಪರೀಕ್ಷಾ ಫಲಿತಾಂಶವನ್ನು ಲ್ಯಾಬ್‌ಗಳು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್​​ಲೋಡ್​ ಮಾಡಬೇಕು. ಆದರೆ ನಗರದಲ್ಲಿ ಕೆಲವು ಲ್ಯಾಬ್​​ಗಳು ಪರೀಕ್ಷಾ ಫಲಿತಾಂಶವನ್ನು ತಡವಾಗಿ ಅಪ್ಲೋಡ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಯು ಸಂಖ್ಯೆಯನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗದೆ ಸಮಸ್ಯೆ ಎದುರಾಗಿದೆ.

ಈ ಸಂಬಂಧ ಪಶ್ಚಿಮ ವಲಯ ವ್ಯಾಪ್ತಿಯ ಮೆಡಲ್ ಲ್ಯಾಬ್, ಆರತಿ ಲ್ಯಾಬ್, ಆರ್.ವಿ ಮೆಟ್ರೊಪಾಲಿಸ್ ಲ್ಯಾಬ್ ಹಾಗೂ ರಾಜರಾಜೇಶ್ವರಿ ನಗರ ವಲಯದ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜು ಲ್ಯಾಬ್ ಸೇರಿ 4 ಲ್ಯಾಬ್‌ಗಳಿಗೆ ನಿನ್ನೆ ಆರೋಗ್ಯಾಧಿಕಾರಿಗಳ ತಂಡವು ಭೇಟಿ ನೀಡಿ ಸ್ವಾಬ್ ಟೆಸ್ಟ್ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ತಡವಾಗಿ ಅಪ್ಲೋಡ್ ಮಾಡುತ್ತಿರುವ ಕಾರಣ ಶೋಕಾಸ್​ ನೋಟಿಸ್​​ ನೀಡಿದೆ. ಇನ್ನು ಪಶ್ಚಿಮ ವಲಯದ 2 ಲ್ಯಾಬ್‌ಗಳಾದ ಮೆಡಲ್ ಲ್ಯಾಬ್ ಹಾಗೂ ಆರತಿ ಲ್ಯಾಬ್ ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

The post ಸ್ವಾಬ್​​ ಟೆಸ್ಟ್​ ಫಲಿತಾಂಶ ತಡವಾಗಿ ಅಪ್ಲೋಡ್​​​- ಖಾಸಗಿ ಲ್ಯಾಬ್​ಗಳಿಗೆ ಬೀಗ appeared first on News First Kannada.

Source: News First Kannada
Read More