ಬೆಂಗಳೂರು: ನಗರದಲ್ಲಿ ನಕಲಿ ಕೊರೊನಾ ರಿಪೋರ್ಟ್​ ನೀಡ್ತಿದ್ದ ಇಬ್ಬರು ಖದೀಮರನ್ನ ಸಿಸಿಬಿ ಪೊಲೀಸರು ಅರೆಸ್ಟ್​ ಮಾಡ್ತಿದ್ದಾರೆ. ಮುಖೇಶ್ ಸಿಂಗ್ ಹಾಗೂ ನಾಗರಾಜ ಬಂಧಿತರು. ಆರೋಪಿಗಳು, ಗಂಟಲು ದ್ರವ ಮಾದರಿ ಸಂಗ್ರಹಿಸಿ ಟೆಸ್ಟ್​ ಮಾಡದೆಯೇ ಕೊರೊನಾ ನೆಗೆಟಿವ್ ಎಂದು ರಿಪೋರ್ಟ್ ಕೊಡ್ತಿದ್ದರು.

ಸದ್ಯ ಜನರು ಅಂತರ್​ ರಾಜ್ಯ ಪ್ರಯಾಣ ಮಾಡಬೇಕೆಂದರೆ ಕೋವಿಡ್ ನೆಗೆಟಿವ್​​ ವರದಿಯನ್ನ ಹೊಂದಿರಬೇಕು. ರೇಲ್ವೆ ನಿಲ್ದಾಣಗಳಲ್ಲಿ ಹಾಗೂ ಇನ್ನಿತರೆ ಕೆಲಸಗಳಿಗೆ ಕೋವಿಡ್​ ರಿಪೋರ್ಟ್​ ಸಲ್ಲಿಸಬೇಕು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು 700 ರೂಪಾಯಿ ಪಡೆದು, ತಮಗೆ ಬೇಕಾದವ್ರಿಗೆ ನಕಲಿ ಕೊರೊನಾ ನೆಗೆಟಿವ್ ರಿಪೋರ್ಟ್​ ಕೊಡ್ತಿದ್ರು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಪೊಲೀಸರು ತಮ್ಮ ಸಿಬ್ಬಂದಿಯನ್ನೇ ಗ್ರಾಹಕರ ವೇಷದಲ್ಲಿ ಕಳಿಸಿದಾಗ ನಕಲಿ ವರದಿ ನೀಡ್ತಿದ್ದಿದ್ದು ಬಯಲಾಗಿದೆ. ಬಳಿಕ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು  ಆರೋಪಿಗಳನ್ನ ಬಂಧಿಸಿದ್ದಾರೆ. ಇವರು ಎಷ್ಟು ಜನರಿಗೆ ಇದೇ ರೀತಿಯ ನಕಲಿ ರಿಪೋರ್ಟ್ ಕೊಟ್ಟಿದ್ದಾರೆ ಎಂಬ ಕುರಿತು ತನಿಖೆ ಮುಂದುವರೆದಿದೆ.

ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಕೂಡ ಇದೇ ರೀತಿಯ ಪ್ರಕರಣ ವರದಿಯಾಗಿದೆ.  ನಕಲಿ ಲೆಟರ್ ಹೆಡ್ ಮೇಲೆ ನಕಲಿ ಕೊರೊನಾ ರಿಪೋರ್ಟ್ ನೀಡುತ್ತಿದ್ದ ಐವರು ಆರೋಪಿಗಳನ್ನ  ದೆಹಲಿಯಲ್ಲಿ ಬಂಧಿಸಲಾಗಿದೆ. 5 ಜನರಲ್ಲಿ ಇಬ್ಬರು ಲ್ಯಾಬ್ ಟೆಕ್ನಿಷಿಯನ್​ಗಳು, ಒಬ್ಬ ವ್ಯದ್ಯೆ ಹಾಗೂ ಮತ್ತೋರ್ವ ಅಪ್ಲಿಕೇಷನ್ ತಜ್ಞ ಎಂದು ತಿಳಿದುಬಂದಿದೆ.

 

ನ್ಯೂಸ್​ಫಸ್ಟ್​ ಕಳಕಳಿ
ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ಸ್ವಾಬ್ ಪಡೆಯದೆ, ₹700ಕ್ಕೆ ಕೊರೊನಾ ನೆಗೆಟಿವ್​ ರಿಪೋರ್ಟ್ ಕೊಡ್ತಿದ್ದ ಖದೀಮರು ಅಂದರ್ appeared first on News First Kannada.

Source: newsfirstlive.com

Source link