ಧಾರವಾಡ: ಸ್ವಾಮಿಜಿಯೊಬ್ಬರ ಜನ್ಮದಿನ ನಿಮಿತ್ತ ಸಿಎಂ ಆಗಮನಿಸುತ್ತಿರೋ ಕಾರಣಕ್ಕಾಗಿ ಶಾಲಾ ಆವರಣದಲ್ಲಿ ನೆಟ್ಟಿದ್ದ 150ಕ್ಕೂ ಹೆಚ್ಚು ಗಿಡಗಳನ್ನು ಕತ್ತರಿಸಿದ ಘಟನೆ ಜಿಲ್ಲೆಯ ಮನಗುಂಡಿ ಗ್ರಾಮದಲ್ಲಿ ನಡೆದಿದೆ.
ಮನಗುಂಡಿ ಗ್ರಾಮದ ಮಾಹಾಮನಿ ಬಸವಾನಂದ ಸ್ವಾಮೀಜಿಯ 50ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆ ಇದೇ ನವೆಂಬರ್ 13ರಂದು ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಅಗಮಿಸಲಿದ್ದಾರೆ. ಅದ್ದೂರಿ ಕಾರ್ಯಕ್ರಮಕ್ಕಾಗಿ ಸರ್ಕಾರಿ ಶಾಲೆಯ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ. ಈ ವೇಳೆ ಅಡ್ಡಲಾಗಿದ್ದ ಸುಮಾರು 150ಕ್ಕೂ ಹೆಚ್ಚಿನ ವಿವಿಧ ಬಗೆಯ ಗಿಡಗಳನ್ನು ಗ್ರಾಮ ಪಂಚಾಯತ್ ಸದಸ್ಯ ಪುಂಡಲೀಕ ಜಕ್ಕಣ್ಣವರ ನೇತೃತ್ವದಲ್ಲಿ ಕಡಿದು ಹಾಕಲಾಗಿದೆ.
ನರೇಗಾ ಯೋಜನೆಯಲ್ಲಿ ಅಡಿಯಲ್ಲಿ 4 ಲಕ್ಷ ವೆಚ್ಚದಲ್ಲಿ ನೆಟ್ಟಿದ್ದ ಗಿಡಗಳನ್ನು ಅರಣ್ಯ ಇಲಾಖೆಗೆ ಯಾವುದೇ ಮಾಹಿತಿಯನ್ನ ನೀಡದೆ ಕಿತ್ತು ಹಾಕಿದ್ದರಿಂದ ಗ್ರಾಪಂ ಸದಸ್ಯನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.