ಸ್ವಿಡನ್​​ನಲ್ಲಿ ಕ್ಲೀನ್​​ ಮಾಡೋಕೆ ಜನರ ಬದಲಿಗೆ ಕಾಗೆಗಳ ಮೊರೆ ಹೋದ ಸರ್ಕಾರ.. ಏನಿದು ಸ್ಟೋರಿ?


ಸಾಮಾನ್ಯವಾಗಿ ನಗರಗಳನ್ನು ಶುಚಿಗೊಳಿಸಲು ಜನರನ್ನು ನೇಮಿಸಿಕೊಂಡಿರುವುದನ್ನು ನೋಡಿದ್ದೀರಿ. ಆದ್ರೆ ಸ್ವೀಡಿಶ್ ಸಂಸ್ಥೆಯೊಂದು ನಗರದಲ್ಲಿನ ಕಸವನ್ನು ಮತ್ತು ಸಿಗರೇಟ್ ತುಂಡುಗಳನ್ನು ಸ್ವಚ್ಚಗೊಳಿಸಲು ಕಾಗೆಗಳನ್ನು ನಿಯೋಜಿಸಿದೆ. ಸೊಡೆರ್ಟಾಲ್ಜೆಯದ ಬೀದಿಗಳಲ್ಲಿನ ಕಸವನ್ನು ತೆಗೆದು ಮಿಷನ್ಸ್​ಗೆ ಹಾಕಲು ಈ ಕಾಗೆಗಳಿಗೆ ಹಂತ-ಹಂತವಾಗಿ ತರಬೇತಿಯನ್ನು ನೀಡಲಾಗುತ್ತಿದೆ.

ಆ ಮಿಷನ್ಸ್ ಕಲ್ಲುಗಳು ಮತ್ತು ಎಲೆಗಳಂತಹ ಇತರ ವಸ್ತುಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ರೀತಿಯ ಕಸವನ್ನು ಹಾಕಬಹುದಾಗಿದೆ.
ಈ ಪ್ರಕ್ರಿಯೆಯು ದಿ ಕೀಪ್ ಸ್ವೀಡನ್ ಟೈಡಿ ಫೌಂಡೇಶನ್‌ನಿಂದ ಕಾರ್ವಿಡ್ ಕ್ಲೀನಿಂಗ್ ಎಂಬ ಪ್ರಾಯೋಗಿಕ ಯೋಜನೆಯ ಭಾಗವಾಗಿದೆ. ಈ ಯೋಜನೆಯು ನಗರದಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸುವ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಇನ್ನು, ಕಾಗೆಗಳಿಗೆ ತರಬೇತಿ ನೀಡುವುದು ಸುಲಭದ ಕೆಲಸ ಎಂದಿದ್ದಾರೆ. ಅಷ್ಟೆ ಅಲ್ಲ ಕಾಗೆಗಳು ಎಷ್ಟು ಸಿಗರೇಟ್ ತುಂಡುಗಳನ್ನು ಎತ್ತಿಕೊಳ್ಳುತ್ತವೆ ಎಂಬುದರ ಮೇಲೆ ನಗರಸಭೆಗೆ ಹಣ ಉಳಿತಾಯವಾಗುತ್ತದೆ ಎಂದಿದ್ದಾರೆ. ಏನೇ ಇರಲಿ ಕಾಗೆಗಳನ್ನು ನಗರ ಶುಚಿ ಮಾಡುವ ಕಾರ್ಯಕ್ಕೆ ಬಳಸಿಕೊಂಡಿರುವುದು ಅಚ್ಚರಿಯ ಸಂಗತಿಯಾಗಿದೆ.

News First Live Kannada


Leave a Reply

Your email address will not be published.