ಸ್ವಿಫ್ಟ್​​ ಕಾರ್ ಪಲ್ಟಿಯಾಗಿ ವ್ಯಕ್ತಿ ಸಾವು, ಇನ್ಸ್​​ಪೆಕ್ಟರ್​​ಗೆ ಗಂಭೀರ ಗಾಯ

ಸ್ವಿಫ್ಟ್​​ ಕಾರ್ ಪಲ್ಟಿಯಾಗಿ ವ್ಯಕ್ತಿ ಸಾವು, ಇನ್ಸ್​​ಪೆಕ್ಟರ್​​ಗೆ ಗಂಭೀರ ಗಾಯ

ಹುಬ್ಬಳ್ಳಿ: ಸ್ವಿಫ್ಟ್​ ಕಾರ್​ವೊಂದು ಪಲ್ಟಿಯಾದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹುಬ್ಬಳ್ಳಿ ಹೊರಹೊಲಯದಲ್ಲಿ ನಡೆದಿದೆ.

ಹುಬ್ಬಳ್ಳಿಯ ರಾಯನಾಳ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ  ಬೆಳಗಾವಿ ಸಂಚಾರಿ ಠಾಣೆಯ ಇನ್ಸ್​ಪೆಕ್ಟರ್ ಮಹಾಬಳೇಶ್ವರ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಯಕ್​ ಅವರ ಸಂಬಂಧಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಾಬಳೇಶ್ವರ ನಾಯಕ್ ಅವರನ್ನ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಸ್ವಿಫ್ಟ್​​ ಕಾರ್ ಪಲ್ಟಿಯಾಗಿ ವ್ಯಕ್ತಿ ಸಾವು, ಇನ್ಸ್​​ಪೆಕ್ಟರ್​​ಗೆ ಗಂಭೀರ ಗಾಯ appeared first on News First Kannada.

Source: newsfirstlive.com

Source link