ಸ್ವಿಮ್ಮಿಂಗ್​​ ಪೂಲ್​​​ ವಿವಾದ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ

ಸ್ವಿಮ್ಮಿಂಗ್​​ ಪೂಲ್​​​ ವಿವಾದ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ

ಮೈಸೂರು: ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಈಜುಕೊಳ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ಕುರಿತು ತನಿಖೆ ನಡೆಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರಿನ ಜನಪ್ರತಿನಿಧಿಗಳು ಅಕ್ರಮ ನಡೆಸಿರುವ ಆರೋಪ ಮಾಡಿದ್ದರು. ಪಾರಂಪರಿಕ ಕಟ್ಟಡವಾಗಿರುವ ಜಿಲ್ಲಾಧಿಕಾರಿಗಳ ನಿವಾಸದ ಬಳಿ ಯಾವುದೇ ಕಟ್ಟಡ ಕಾಮಗಾರಿ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ ಕಾನೂನು ಬಾಹಿರವಾಗಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಲಾಗಿದೆ. ಸ್ವಿಮ್ಮಿಂಗ್​ ಫೂಲ್​​ ಹಾಗೂ ಜಿಮ್​ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳು 50 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತನಿಖೆಗೆ ಆದೇಶ ನೀಡಿದ್ದು, ಮೈಸೂರು ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್‌‌ಗೆ ತನಿಖೆಯ ನೇತೃತ್ವ ನಡೆಸಲು ಸೂಚನೆ ನೀಡಿದೆ.

The post ಸ್ವಿಮ್ಮಿಂಗ್​​ ಪೂಲ್​​​ ವಿವಾದ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ appeared first on News First Kannada.

Source: newsfirstlive.com

Source link