ನವದೆಹಲಿ: ಸ್ವಿಸ್​​ ಬ್ಯಾಂಕ್​​​ನಲ್ಲಿನ ಭಾರತೀಯರ ಹಣವು 2020ರಲ್ಲಿ 20 ಸಾವಿರದ 700 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂಬ ವರದಿಯನ್ನ ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದೆ. ಅಲ್ಲದೇ ಸ್ವಿಸ್ ಬ್ಯಾಂಕ್​ನಿಂದ ಭಾರತೀಯರ ಠೇವಣಿ ಹಣದ ಮಾಹಿತಿ ಕೇಳಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವಾಲಯ, ಸ್ವಿಸ್​​ ನ್ಯಾಷನಲ್​ ಬ್ಯಾಂಕ್​​​ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಗಳ ಠೇವಣಿಯು 2019ರ ಅಂತ್ಯದಿಂದ 2020ರ ಅಂತ್ಯದವರೆಗೆ 6 ಸಾವಿರದ 625 ಸಾವಿರ ಕೋಟಿಯಿಂದ 20 ಸಾವಿರದ 700 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿವೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದೆ ಅಂತಾ ತಿಳಿಸಿದೆ.

ಇದನ್ನೂ ಓದಿ: ಭಾರತೀಯರ ಸ್ವಿಸ್​ ​​ಬ್ಯಾಂಕ್​​ನಲ್ಲಿರೋ ಹಣ ₹20,700 ಕೋಟಿ ಹೆಚ್ಚಳ; ಏನಿದರ ಮರ್ಮ?

2019ರ ಅಂತ್ಯದ ವೇಳೆಗೆ 899 ಮಿಲಿಯನ್ ಸ್ವಿಸ್ ಫ್ರಾಂಕ್‌ (6,625 ಕೋಟಿ ರೂ.) ಗಳಿಷ್ಟ ಮೊತ್ತವೂ 2020ರ ಅಂತ್ಯದ ವೇಳೆಗೆ 20,700 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಕಳೆದ ಎರಡು ವರ್ಷಗಳಿಂದ ಕಡಿಮೆಯಾಗಿದ್ದ ಮೊತ್ತದ ಪ್ರಮಾಣ 2020ರಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, 13 ವರ್ಷಗಳಲ್ಲಿ ಈ ಬಾರಿ ಅತೀ ಹೆಚ್ಚು ಹಣ ಇರಿಸಿದ್ದಾರೆ ಎಂದು ಸ್ವಿಸ್​​ ನ್ಯಾಷನಲ್​ ಬ್ಯಾಂಕ್ ಮಾಹಿತಿ ನೀಡಿತ್ತು.

The post ಸ್ವಿಸ್​ ಬ್ಯಾಂಕ್​ನಲ್ಲಿ ಭಾರತೀಯರ ಹಣ ₹20,700 ಕೋಟಿಗೆ ಹೆಚ್ಚಳ: ಮಾಹಿತಿ ಕೇಳಿದ ಕೇಂದ್ರ appeared first on News First Kannada.

Source: newsfirstlive.com

Source link