– 3 ಷರತ್ತು ಪಾಲನೆಯಾದರೆ ಮಾತ್ರ ಅನ್‍ಲಾಕ್
– ಸರ್ಕಾರಕ್ಕೆ ತಜ್ಞರಿಂದ ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಜೂನ್ 7ರ ಬಳಿಕವೂ ಲಾಕ್‍ಡೌನ್ ವಿಸ್ತರಣೆ ಮಾಡುವುದು ಬಹುತೇಕ ಪಕ್ಕಾ. ತಾಂತ್ರಿಕ ಸಮಿತಿ ಸದಸ್ಯರು ತಮ್ಮ ವರದಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‍ಗೆ ಸಲ್ಲಿಸಿದ್ದಾರೆ.

ವರದಿಯಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ ಮಾಡೆಲ್ ಪ್ರಸ್ತಾಪಿಸಿದ್ದಾರೆ. ಜೊತೆಗೆ, ಅನ್‍ಲಾಕ್‍ಗೆ 3 ಪ್ರಮುಖ ಷರತ್ತುಗಳನ್ನು ಸೂಚಿಸಿದ್ದಾರೆ. 3 ಷರತ್ತು ಪಾಲನೆಯಾದ್ರಷ್ಟೇ ಅನ್‍ಲಾಕ್ ಮಾಡಿ, ಇಲ್ಲವಾದಲ್ಲಿ ಲಾಕ್‍ಡೌನ್ ಮುಂದುವರಿಕೆ ಅನಿವಾರ್ಯ ಅಂದಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಜೂನ್ 14ರವರೆಗೆ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆ – ಅನ್‍ಲಾಕ್‍ಗೆ ತಜ್ಞರ 3 ಷರತ್ತು

ತಜ್ಞರ ವರದಿಯ ಸಾರಾಂಶವನ್ನು ಹೊತ್ತೊಯ್ದ ಸುಧಾಕರ್, ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ, ತಜ್ಞರ ವರದಿಯನ್ನೇ ಪರಿಗಣಿಸೋಣ, ಸಚಿವರ ಜೊತೆಯೂ ಮಾತಾಡೋಣ. ಇನ್ನೊಂದು ವಾರ ಮುಂದುವರಿಸುವ ಬಗ್ಗೆ ಎರಡ್ಮೂರು ದಿನದಲ್ಲಿ ನಿರ್ಧಾರ ಮಾಡೋಣ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನಾಳೆ ಕೋವಿಡ್ ನಿರ್ವಹಣಾ ಸಚಿವರ ಜೊತೆ ಸಿಎಂ ಸಭೆ ಕರೆದಿದ್ದಾರೆ. ಸಭೆ ಬಳಿಕ ಬುಧವಾರ ಅಥವಾ ಗುರುವಾರ ಮತ್ತೊಮ್ಮೆ ಸಚಿವರು, ಅಧಿಕಾರಿಗಳು, ತಜ್ಞರ ಜೊತೆ ಸಭೆ ನಡೆಸಿ, ಶುಕ್ರವಾರದೊಳಗೆ ಲಾಕ್ ಡೌನ್ ವಿಸ್ತರಣೆ ಘೋಷಿಸುವ ಸಾಧ್ಯತೆ ಇದೆ.

ಈ ನಡುವೆ ಕೊರೊನಾ ಸೋಂಕು ಕಡಿಮೆಯಾದರೆ ಜೂನ್ 7ರ ನಂತರ ಹಂತ ಹಂತವಾಗಿ ಅನ್‍ಲಾಕ್ ಮಾಡಿ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಬಳಿಯೂ ಪ್ಲಾನ್ ಸಿದ್ಧವಾಗಿದೆ. ಸರ್ಕಾರದ ಬಳಿ ಇರುವ ಪ್ಲಾನ್ ಏನು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

ಹಂತ -1 (ಜೂನ್ 13ರವರೆಗೆ)
* ದಿನಸಿ, ಕಿರಾಣಿ ಅಂಗಡಿಗಳು ಇಡೀ ದಿನ ಒಪನ್
* ತರಕಾರಿ ಹಣ್ಣಿನ ಅಂಗಡಿಗಳು ಒಪನ್
* ಅಗತ್ಯ ವಸ್ತುಗಳ ಖರೀದಿಗೆ ಸಂಪೂರ್ಣ ಅವಕಾಶ
* ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಇಡೀ ದಿನ ಅವಕಾಶ
* ಸೀಮಿತ ಸಂಖ್ಯೆಯಲ್ಲಿ ಸಾರಿಗೆ ಸೇವೆ ಆರಂಭ ಇದನ್ನೂ ಓದಿ : ಜೂನ್ 7ರಿಂದ ಕೆಲಸಕ್ಕೆ ಹಾಜರಾಗಿ: ಬಿಎಂಟಿಸಿ ಸಿಬ್ಬಂದಿಗೆ ಸೂಚನೆ

ಹಂತ -2 (ಜೂನ್ 20 ರವರೆಗೆ)
* ಬಟ್ಟೆಯಂಗಡಿ ಓಪನ್
* ಜ್ಯುವೆಲ್ಲರಿ ಶಾಪ್ ಓಪನ್
* ಚಪಲಿಯಂಗಡಿ
* ಬಾರ್ ವೈನ್
* ಸೀಮಿತ ಸಿಬ್ಬಂದಿಯೊಂದಿಗೆ ಕೈಗಾರಿಕೆ (ಶೇ. 30-50)
* ಸಮೂಹ ಸಾರಿಗೆ ವ್ಯವಸ್ಥೆ ಶೇ.50-60ರಷ್ಟು ಹೆಚ್ಚಳ

ಹಂತ -3 (ಜೂನ್ 27ರವರೆಗೆ)
* ಕೈಗಾರಿಕೆಗಳಿಗೆ, ಐಟಿ ವಲಯಕ್ಕೆ ಸಂಪೂರ್ಣ ಅವಕಾಶ
* ಮೆಟ್ರೋ ಸಮೂಹ ಸಾರಿಗೆ ಆರಂಭ
* ಬಿಎಂಟಿಸಿ, ಕೆಎಸ್‌ಆರ್‌ಟಿಸಿ  ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ

ಹಂತ -4 (ಜೂನ್ 27ರ ನಂತರ)
* ಮಾಲ್‍ಗಳಿಗೆ ಅವಕಾಶ
* ಧಾರ್ಮಿಕ ಕ್ಷೇತ್ರಗಳು ಓಪನ್
* ಸಿನಿಮಾ ಥಿಯೇಟರ್ ಓಪನ್(ಶೇ.50 ಆಸನ ಭರ್ತಿ)
* ಪಾರ್ಕ್, ಜಿಮ್ ಓಪನ್
* ಶಿಕ್ಷಣ ಸಂಸ್ಥೆಗಳು ಓಪನ್
* ಹೋಟೆಲ್‍ಗಳಲ್ಲಿ ಡೈನಿಂಗ್ ಸೇವೆ
* ಕ್ಲಬ್ ಗಳು ಓಪನ್

The post ಹಂತ ಹಂತವಾಗಿ ಅನ್‍ಲಾಕ್ – ಯಾವ ಸೇವೆ ಯಾವಾಗ ಆರಂಭ? appeared first on Public TV.

Source: publictv.in

Source link