ವಿಜಯನಗರ: ಈ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಯಾರನ್ನೂ ಬಿಡದ ಈ ಕೊರೊನಾದಿಂದಾಗಿ, ಅದೆಷ್ಟೋ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಹಲವರು ನೆರವಿನ ಹಸ್ತವನ್ನೂ ಚಾಚಿದ್ದಾರೆ. ಅದರಲ್ಲಿ, ಸದಾ ಎಲ್ಲರ ಕಷ್ಟಗಳಿಗೆ ಸ್ಪಂದಿಸೋ ಮಾತೃ ಹೃದಯಿ ಡಾ.ಸುಧಾಮೂರ್ತಿ ಮಿಡಿದಿದ್ದಾರೆ.

ಹಂಪಿ ಪ್ರವಾಸಿ ಗೈಡ್ಸ್‌ಗಳಿಗೆ ನೆರವಿನ ಸಹಾಯ ಹಸ್ತ ನೀಡಿದ್ದಾರೆ ಸುಧಾಮೂರ್ತಿ. ಕೊರೊನಾ ಹೊಡೆತಕ್ಕೆ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ 70ಕ್ಕೂ ಹೆಚ್ಚು ಖಾಸಗಿ ಗೈಡ್ಸ್‌ಗಳಿಗೆ, ತಲಾ 10 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ ಸುಧಾಮೂರ್ತಿ. ಪ್ರತಿಯೊಬ್ಬ ಗೈಡ್​ನ ಅಕೌಂಟ್​ಗೆ ಹಣವನ್ನ ಜಪ್ತಿ ಮಾಡಿದ್ದಾರೆ. ಮೊದಲ ಕೊರೊನಾ ಅಲೆಯಲ್ಲೂ ಸಹಾಯ ಹಸ್ತ ಚಾಚಿದ್ದ ಸುಧಾಮೂರ್ತಿಯವರು, ಎರಡನೇ ಲಾಕ್ ಡೌನ್​ನಲ್ಲೂ ಅದನ್ನ ಮುಂದುವರೆಸಿದ್ದು ​​ಇವರ ಈ ಕಾರ್ಯಕ್ಕೆ ಹಂಪಿ ಗೈಡ್ಸ್​ ಅಭಿನಂದನೆ ಸಲ್ಲಿಸಿದ್ದಾರೆ.

The post ಹಂಪಿಯ 70ಕ್ಕೂ ಹೆಚ್ಚು ಖಾಸಗಿ ಗೈಡ್​​ಗಳಿಗೆ ಸಹಾಯ ಮಾಡಿದ ಮಾತೃ ಹೃದಯಿ ಡಾ.ಸುಧಾಮೂರ್ತಿ appeared first on News First Kannada.

Source: newsfirstlive.com

Source link