ಹಂಪ್ಸ್​ ಇದೆ ಎಂಬು ಬ್ರೇಕ್ ಹೊಡೆದ ಲಾರಿಗೆ ಕಾರ್ ಡಿಕ್ಕಿ.. ಸ್ಥಳದಲ್ಲೇ ಮೂವರು ದುರ್ಮರಣ

ಹಂಪ್ಸ್​ ಇದೆ ಎಂಬು ಬ್ರೇಕ್ ಹೊಡೆದ ಲಾರಿಗೆ ಕಾರ್ ಡಿಕ್ಕಿ.. ಸ್ಥಳದಲ್ಲೇ ಮೂವರು ದುರ್ಮರಣ

ಹಾಸನ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹೊರವಲಯದಲ್ಲಿ ನಡೆದಿದೆ.

ಜಿಲ್ಲೆಯ ಹೊರವಲಯದ ಕೆಂಚಟ್ಟಹಳ್ಳಿ ಬಳಿ ಈ ಘಟನೆ ನಡೆದಿದ್ದು ಮೂವರು ಸಾವನ್ನಪ್ಪಿದ್ದಾರೆ.. ಓರ್ವನ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ಓರ್ವನ ಗುರುತು ಪತ್ತೆಯಾಗಿದ್ದು, ಆತ ಬೆಳ್ತಂಗಡಿ ಮೂಲದ ಯೋಗೇಶ್ ಎನ್ನಲಾಗಿದೆ. ಕೆಂಚಟ್ಟಹಳ್ಳಿ ಬಳಿ ಹಂಪ್ಸ್ ಇದ್ದ ಕಾರಣ ದಿಢೀರ್​ ಅಂತ ಲಾರಿ ಚಾಲಕ ಬ್ರೇಕ್ ಹಾಕಿದ್ದಾನೆ.. ಈ ವೇಳೆ ಲಾರಿ ಹಿಂದೆ ವೇಗವಾಗಿ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸದ್ಯ ಗಾಯಗೊಂಡ ವ್ಯಕ್ತಿಯನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಹಂಪ್ಸ್​ ಇದೆ ಎಂಬು ಬ್ರೇಕ್ ಹೊಡೆದ ಲಾರಿಗೆ ಕಾರ್ ಡಿಕ್ಕಿ.. ಸ್ಥಳದಲ್ಲೇ ಮೂವರು ದುರ್ಮರಣ appeared first on News First Kannada.

Source: newsfirstlive.com

Source link