ಬೆಂಗಳೂರು: ಹಂಸಲೇಖ ಅವರ ಬಗ್ಗೆ ನನಗೆ ಅಪಾರ ಗೌರವ ಇತ್ತು. ಹಿಂದೂಗಳ ಭಾವನೆ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿ, ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಅಂತಾ ಹಂಸಲೇಖ ವಿರುದ್ಧ ಶಾಸಕ ಎಂ ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವ್ರು..ಉಡುಪಿ ಪೇಜಾವರ ಶ್ರೀಗಳ ಬಗ್ಗೆ ಎಲ್ಲಾ ಧರ್ಮದವರಿಗೆ ಗೌರವ ಇದೆ. ಅಂತವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಪ್ರತಿಯೊಬ್ಬರೂ ಈ ಹೇಳಿಕೆ ಖಂಡಿಸಿದ್ದಾರೆ. ಪೇಜಾವರರು ದಲಿತರ ಬಗ್ಗೆ ಕಾಳಜಿ ಇತ್ತು, ಹಾಗಾಗಿ ಕಾಲೋನಿಗೆ ಹೋಗಿ ಅವರ ಏಳಿಗೆ ಬಹಿಸಿದ್ರು. ಇನ್ಮುಂದೆ ಈ ರೀತಿ ಹೇಳಿಕೆ ಕೊಟ್ರೆ ಸರಿಯಿರಲ್ಲ. ನಾವು ಕಲೆಗೆ ಗೌರವ ಕೊಡುವವರು. ಈ ರೀತಿ ಹೇಳಿಕೆ ಕೊಡಬಾರದು ಅಂತ ಹಂಸಲೇಖರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿ ರಕ್ತ ಕುಡಿತಾರಾ? ಹಂಸಲೇಖ ಪ್ರಶ್ನೆ
ಏನಂದಿದ್ರು ಹಂಸಲೇಖ..?
ನಾದಬ್ರಹ್ಮ ಹಂಸಲೇಖ ಅವರನ್ನ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖ..‘ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗತ್ತಾ? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದರು..’ ಎಂದಿದ್ದರು.
ಇದನ್ನೂ ಓದಿ: ದಲಿತರ ಮನೆಯಲ್ಲಿ ಪೇಜಾವರ ಶ್ರೀ ಕೋಳಿ ತಿಂತಾರಾ ಹೇಳಿಕೆ; ಕ್ಷಮೆ ಕೇಳಿದ ಹಂಸಲೇಖ