ಹಗರಣ ಮುಚ್ಚಿ ಹಾಕೋದು ಅದ್ಕಿಂತ ದೊಡ್ಡ ಸ್ಕ್ಯಾಮ್ -Bitcoin ಸ್ಕ್ಯಾಮ್​ ವಿರುದ್ಧ ರಾಹುಲ್ ಎಂಟ್ರಿ


ನವದೆಹಲಿ: ಬಿಟ್​​ ಕಾಯಿನ್ ಹಗರಣ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರಂತೆ ನಿನ್ನೆ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಂದೀಪ್ ಸುರ್ಜೇವಾಲ ಸುದ್ದಿಗೋಷ್ಟಿ ನಡೆಸಿ ಸಿಎಂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದರು.

ರಾಜ್ಯದಲ್ಲಿ ನಡೆಯುತ್ತಿರುವ ಬಿಟ್​ ಕಾಯಿನ್​ ಪ್ರಕರಣದ ವಿಷಯವಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ. ಬಿಟ್​ ಕಾಯಿನ್​ ಹಗರಣ ಬಹು ದೊಡ್ಡ ಹಗರಣವಾಗಿದೆ. ಆದ್ರೆ ಇದನ್ನ ಮುಚ್ಚಿ ಹಾಕಲು ಅದಕ್ಕಿಂತ ದೊಡ್ಡ ಸ್ಕ್ಯಾಮ್​ ನಡೀತಿದೆ ಅಂತ ಬಿಜೆಪಿ ನಾಯಕರ ಮೇಲೆ ಆರೋಪಿಸಿದ್ದಾರೆ. ಅಲ್ಲದೇ ಈ ಹಗರಣದಲ್ಲಿ ಗಣ್ಯ ವ್ಯಕ್ತಿಗಳ ಹೆಸರು ಕೇಳಿಬಂದಿದೆ. ಇವರ ಹೆಸರುಗಳೆಲ್ಲಾ ಹೊರ ಬಂದ್ರೆ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗುವ ಭಯವಿದೆ ಅಂತ ರಾಹುಲ್​ ಗಾಂಧಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಸಿಜೆಐ ನೇತೃತ್ವದಲ್ಲಿ ತನಿಖೆಗೆ ಆಗ್ರಹ
ರಾಜ್ಯದ ಬಹಕೋಟಿ ಬಿಟ್​ ಕಾಯಿನ್ ಹಗರಣವನ್ನು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್​ ಸುರ್ಜೇವಾಲ ಆಗ್ರಹಿಸಿದ್ದಾರೆ. ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲ, ಸಾವಿರಾರು ಕೋಟಿ ರೂಪಾಯಿಗಳ ಹಗರಣವನ್ನು ತನಿಖೆಗೆ ಆಗ್ರಹಿಸುವ ಬದಲು, ಹಗರಣದ ಆರೋಪಗಳನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಮೋದಿ ಸಿಎಂಗೆ ಹೇಳುವ ಮೂಲಕ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಣದೀಪ್​ ಸುರ್ಜೇವಾಲ ಆರೋಪಿಸಿದ್ದಾರೆ.

ಇದನ್ನೂ ಓದಿ: ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಶೋ ಮ್ಯಾನ್ ಪ್ರೇಮ್.. ಎಣ್ಣೆ ಹಾಡಿನಲ್ಲಿ ಚಳಿಬಿಟ್ಟು ಕುಣಿದ ರಚಿತಾ ರಾಮ್

ಇದನ್ನೂ ಓದಿ: 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಆರೋಪಿಯೂ ಎನ್​​ಕೌಂಟರ್; ಮಿಲಿಂದ್ ಕೊಂದವ್ರಿಗೆ ಸಿಕ್ತು ₹25 ಲಕ್ಷ

ಇದನ್ನೂ ಓದಿ: ಆಯ್ಕೆ ಸಮಿತಿ ವಿರುದ್ಧ ಶಾಸ್ತ್ರಿ ಹೊಸ ಬಾಂಬ್; ಗಂಗೂಲಿ ಆಡಳಿತದ ಅವಧಿಯಲ್ಲೇ ಹೀಗ್ಯಾಕೆ ಆಯ್ತು..?

 

News First Live Kannada


Leave a Reply

Your email address will not be published. Required fields are marked *