ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆಗೆ 500ಕ್ಕೂ ಹೆಚ್ಚು ಹಳೆ ಟೈರ್ ಗಳು ಸುಟ್ಟು ಭಸ್ಮಗೊಂಡಿವೆ.
ಕಂಪನಿ ವಿಲೇಜ್ ಶಾಫ್ಟ್ ನಲ್ಲಿ ಕಸಕ್ಕೆ ಹಚ್ಚಿದ ಬೆಂಕಿಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಬೆಂಕಿ ಅವಘಡದ ಸ್ಥಳದ ಪಕ್ಕದಲ್ಲೇ ಮದ್ದಿನ ಮನೆಯಿದೆ. ಆದರಿಂದ ಸಿಬ್ಬಂದಿಗಳಿಗೆ ಈಡೀ ಗಣಿಗೆ ಬೆಂಕಿ ತಾಕಿಕೊಳ್ಳು ಆತಂಕ ಎದುರಾಗಿದೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.