ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೀಗ ಆಸಿಡ್ ಮಳೆಯ ಭೀತಿ ಉಂಟಾಗಿದೆ. ಪರಿಸರ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಆಮ್ಲ ಮಳೆಯ ಬಗ್ಗೆ ಸೂಚನೆ ನೀಡಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಅಷ್ಟಕ್ಕೂ ಆಗಿದ್ದೇನು..?
ದ್ವೀಪರಾಷ್ಟ್ರ ಶ್ರೀಲಂಕಾಗೆ ಕೊರೊನಾ ಕರಿಛಾಯೆಯ ನಡುವೆ ಮತ್ತೊಂದು ಭೀತಿ ಶುರುವಾಗಿದೆ. ಲಂಕಾ ರಾಜಧಾನಿ ಕೊಲಂಬೊ ಬೀಚ್ ಸಮೀಪ ಮೊನ್ನೆ ಮೊನ್ನೆಯಷ್ಟೇ ಒಂದು ಹಡಗಿಗೆ ಬೆಂಕಿ ಬಿದ್ದು ಭಾರೀ ಅನಾಹುತ ಸಂಭವಿಸಿತ್ತು. ಅಂದು ಅವಘಡಕ್ಕೆ ತುತ್ತಾಗಿದ್ದ ಹಡಗಿನಲ್ಲಿ ಕಾಸ್ಮೆಟಿಕ್‌ಗಳ ಕಚ್ಚಾ ವಸ್ತುಗಳು ಹಾಗೂ ಕೆಮಿಕಲ್‌ಗಳು ಇತ್ತು. ಈ ಹಡಗಿನ ಟ್ಯಾಂಕ್‌ಗಳಲ್ಲಿ 325 ಮೆಟ್ರಿಕ್ ಟನ್‌ನಷ್ಟು ಇಂಧನದ ಜತೆಗೆ, 25 ಟನ್‌ಗಳಷ್ಟು ಅಪಾಯಕಾರಿ ನೈಟ್ರಿಕ್ ಆಸಿಡ್‌ನ 1486 ಕಂಟೇನರ್‌ಗಳನ್ನು ಸಾಗಿಸಲಾಗ್ತಿತ್ತು. ಆದ್ರೆ ಕೊಲಂಬೊ ಕರಾವಳಿಯಿಂದ 9.5 ಮೈಲು ದೂರವಿದ್ದಾಗ ಹಡಗಿಗೆ ಬೆಂಕಿ ಹೊತ್ತಿಕೊಂಡಿತ್ತು. ಪರಿಣಾಮ ಸಾಗರದ ನಡುವೆನೇ ಸರಕು ಸಾಗಣಿಕೆ ಹಡಗು ಅಕ್ಷರಶಃ ಧಗಧಗಿಸಿತ್ತು. ಎಕ್ಸ್ ಪ್ರೆಸ್ ಪರ್ಲ್ ಎಂಬ ಸರಕು ಸಾಗಾಣಿಕೆ ಹಡಗು ಹೊತ್ತಿ ಉರಿದು ಕಡಲ ಒಡಲಲ್ಲಿ ಲೀನಾವಾಗಿ ಬಿಟ್ಟಿತ್ತು.

ನೋಡ ನೋಡುತ್ತಲೇ ದೊಡ್ಡ ಹಡಗಿನಲ್ಲಿ ಇದ್ದಷ್ಟು ಸರಕುಗಳೆಲ್ಲವೂ ಹೊತ್ತಿ ಉರಿದು ಸಾಗರದ ಮಡಿಲು ಸೇರಿ ಬಿಟ್ಟಿತ್ತು. ಕಳೆದ ಕಳೆದ ವಾರ ಸಿಂಗಪುರ ಮೂಲದ ಸರಕು ಸಾಗಣೆ ಹಡಗಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹಡಗಿನಲ್ಲಿದ್ದ ನೈಟ್ರೋಜನ್ ಡೈಆಕ್ಸೈಡ್ ಹೊಗೆ ರೂಪದಲ್ಲಿ ವಾತಾವರಣ ಸೇರಿದ್ದು, ಇದ್ರಿಂದ ಲಂಕಾ ಮಡಿಲಲ್ಲಿ ಆಮ್ಲ ಮಳೆಯ ದಿಗಿಲು ಶುರುವಾಗಿದೆ.

ಶ್ರೀಲಂಕಾದಲ್ಲಿ ಆಮ್ಲ ಮಳೆಯಾಗುವ ಸಾಧ್ಯತೆ
ಕರಾವಳಿ ಪರಿಸರ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಕೆ

ರಾಸಾಯನಿಕಗಳನ್ನು ಹೊತ್ತು ತರುತ್ತಿದ್ದ ಸರಕು ಹಡಗು ಹೊತ್ತಿ ಉರಿದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಸೋರಿಕೆಯಾಗಿದೆ. ಮಳೆಗಾಳದಲ್ಲಿ ನೈಟ್ರೋಜೆನ್ ಡೈ ಆಕ್ಸೈಡ್ ಸೋರಿಕೆಯಾದ್ರೆ ಆಮ್ಲ ಮಳೆಯಾಗುವ ಸಾಧ್ಯತೆ ಇರುತ್ತದೆ. ಇದ್ರಿಂದ ಕೊಲಂಬೋದಾ ಸುತ್ತ ಮುತ್ತಲಿನ ಕೆಲ ಪ್ರದೇಶಗಳಲ್ಲಿ ಲಘುವಾಗಿ ಆಮ್ಲ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಕರಾವಳಿ ಪರಿಸರ ಸಂರಕ್ಷಣಾ ಪ್ರಾಧಿಕರಾ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಪ್ರತಿಕೂಲ ಹವಾಮಾನ ಏರ್ಪಟ್ಟರೆ ಅನಾವುತ ಸಂಭವಿವಿಸುವ ಸಾಧ್ಯತೆ ಇದ್ದು, ಕರಾವಳಿ ಪ್ರದೇಶದ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

ಆಸಿಡ್ ಮಳೆಯ ಅಪಾಯ ಅರಿತ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಾವಾಗಿ ಕರಾವಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮಳೆ ಬರುವಾಗ ಹೊರಗಡೆ ಹೋಗದಂತೆ, ಮಳೆಯಲ್ಲಿ ನೆನೆಯದಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಶ್ರೀಲಂಕಾದಲ್ಲಿ ಆಮ್ಲ ಮಳೆಯಾದ್ರೆ ಇವು ಹಲವು ಸಮಸ್ಯೆಗಳಿಗೆ ಮುನ್ನುಡಿ ಬರೆಯಲಿದೆ. ಈ ಆಮ್ಲ ಮಳೆಯೆನ್ನುವುದು ಸಾಮಾನ್ಯ ಮಳೆಯಲ್ಲ. ಆಸಿಡ್ ಮಳೆ ಸುರಿದ್ರೆ ಸಂಕಷ್ಟ ಸರಪಳಿಯನ್ನೇ ಸೃಷ್ಟಿಸಿ ಬಿಡಲಿದೆ ಎನ್ನಲಾಗಿದೆ.

ಆಸಿಡ್ ಮಳೆಯಾದ್ರೆ ಎದುರಾಗಲಿದೆ ಮಹಾ ಸಂಕಷ್ಟ
ಕರಾವಳಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಎಚ್ಚರಿಸಿದಂತೆ ಲಂಕಾದಲ್ಲಿ ಒಂದು ವೇಳೇ ಆಮ್ಲ ಮಳೆಯಾದ್ರೆ ಹಲವು ದುಷ್ಪರಿಣಾಮಗಳು ಸಂಭವಿಸಲಿದೆ. ಆಮ್ಲ ಮಳೆಯ ಆಮ್ಲ ಮಿಶ್ರಿತ ನೀರು ನದಿ, ಕೆರೆಗಳನ್ನು ಸೇರ್ಕೊಂಡ್ರೆ ಜೀವಿಗಳಿಗೆ ಬಾರಿ ಹಾನಿವುಂಟು ಮಾಡಲಿದೆ. ಯಾಕಂದ್ರೆ ಅವು ಜೀವಿಗಳ ಜೈವಿಕ ಕ್ರಿಯೆಗಳಿಗೆ ತೊಡಕು ಉಂಟು ಮಾಡಲಿದೆ. ಮಾನವರು ಮಾತ್ರವಲ್ಲದೇ, ಮೂಕ ಪ್ರಾಣಿ, ಪಕ್ಷಿಗಳಿಗೆ ಈ ಆಸಿಡ್ ಮಳೆ ಸಂಕಷ್ಟ ತಂದೊಡ್ಡಲಿವೆ.

ಆಸಿಡ್ ಮಳೆಯಾದ್ರೆ ಉಂಟಾಗುವ ಸಮಸ್ಯೆಗಳು

  • ಸಸ್ಯಗಳ ಮೇಲೆ ಬಿದ್ದರೆ ಸಸ್ಯಗಳ ಎಲೆಗಳ ಮೇಲ್ಪದರ ನಾಶವಾಗಲಿದೆ
  • ಮನುಷ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ
  • ಮನುಷ್ಯರ ಮೇಲೆ ಬಿದ್ದರೆ ಮಾನವನ ಚರ್ಮಕ್ಕೆ ಬಾರಿ ಹಾನಿಯಾಗಲಿದೆ
  • ಆಮ್ಲ ಮಳೆಯಿಂದ ಮುಂದೆ ಚರ್ಮ ರೋಗ ಕೂಡ ಬರುವ ಸಾಧ್ಯತೆ
  • ಆಮ್ಲ ಮಳೆ ಪ್ರಾಣಿಗಳ ಚರ್ಮಕ್ಕೂ ಹಾನಿಯುಂಟು ಮಾಡಲಿದೆ
  • ಮಣ್ಣಿನ ಮೇಲೆ ಬಿದ್ದರೆ ಮಣ್ಣು ಆಮ್ಲಯುಕ್ತವಾಗಿ ಫಲವತ್ತತೆ ಕಳೆದುಕೊಳ್ಳಲಿದೆ
  • ಆಸಿಡ್ ಮಳೆಯಿಂದ ಕಟ್ಟಡಗಳಿಗೂ ಭಾರಿ ಸಮಸ್ಯೆ ಉಂಟಾಗಲಿದೆ
  • ಆಮ್ಲಗಳ ಲೇಪನದಿಂದ ಕಟ್ಟಡಗಳ ಗೋಡೆಗಳಿಗೂ ಹಾನಿಯಾಗಲಿದೆ
  • ಮುಂದೆ ಇವು ದೊಡ್ಡ ಮಟ್ಟದ ಕಟ್ಟಡ ಕುಸಿಯಲು ಕಾರಣವಾಗಬಹುದು

ಆಸಿಡ್ ಮಳೆಯು ಮುಂದೆ ಚರ್ಮ ರೋಗಕ್ಕೂ ಕಾರಣವಾಗುವ ಸಾಧ್ಯತೆ ಇರುವುದರಿಂದ ಮಳೆಯ ವೇಳೆ ಮನೆ ಬಿಟ್ಟು ಹೊರ ಬರದಂತೆ ಕೊಲಂಬೋದ ಸುತ್ತ ಮುತ್ತಲಿನ ಜನರಿಗೆ ತಿಳಿಸಲಾಗಿದೆ. ಕಟ್ಟಡಗಳಿಗೂ ಅಪಾಯ ತಂದಿಡಲಿದ್ದು, ಕಟ್ಟದಲ್ಲಿದ್ದ ಲೋಹದ ವಸ್ತುಗಳನ್ನು ಆಮ್ಲ ಕೊರೆಯುತ್ತದೆ. ಇದ್ರಿಂದ ಮುಂದೆ ಇವು ಕಟ್ಟಡ ಕುಸಿಯಲು ಕೂಡ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ. ಇದ್ರಿಂದ ದ್ವೀಪ ರಾಷ್ಟ್ರದಲ್ಲಿ ಇದೀಗ ಭಯದ ವಾತಾವರಣ ಮೂಡಿದ್ದು, ಜನರು ಮುಂದೇ ಏನ್ ಅಪಾಯ ಕಾದಿದ್ಯೋ ಮುಂದಿನ ಕರಾಳ ಸನ್ನಿವೇಶಗಳ್ನು ನೆನೆದು ಜನರು ದಿಗಿಲುಗೊಂಡಿದ್ದಾರೆ.

ಈಗಾಗಲೇ ಶ್ರೀಲಂಕಾದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಕೊರೊನಾದ ಹೊಸ ಹೊಸ ತಳಿಗಳು ಕೂಡ ಕಂಡು ಬರ್ತಿದೆ. ಕೊರೊನಾ ಕರಿನೆರಳು ಲಂಕಾದಲ್ಲಿ ಪಸರಿಸಿದ್ದು, ದೇಶವೇ ತಲ್ಲಣಗೊಂಡಿದೆ. ಇಂತಹ ಹೊತ್ತಲ್ಲೇ ಆಸಿಡ್ ಮಳೆಯ ಭೀತಿ ಕೂಡ ಉಂಟಾಗಿದ್ದು, ಲಂಕಾದಲ್ಲಿ ಮಡಿಲಲ್ಲಿ ಆತಂಕದ ಕಾರ್ಮೋಡ ಕವಿದಿದೆ.

The post ಹಡಗಿನಲ್ಲಿ ಬೆಂಕಿ.. ಲಂಕಾದಲ್ಲಿ ಇದೀಗ ಆಸಿಡ್ ಮಳೆಯ ಕಾರ್ಮೋಡ appeared first on News First Kannada.

Source: newsfirstlive.com

Source link