ಮಂಗಳೂರು: ಹೈಟೆಕ್ ಹನಿಟ್ರ್ಯಾಪ್ ಜಾಲ ಭೇದಿಸಿರುವ ಪುತ್ತೂರು ಠಾಣೆಯ ಪೊಲೀಸರು ಬಂಟ್ವಾಳದ ಯುವತಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಉದ್ಯಮಿಗಳನ್ನು ಖೆಡ್ಡಾಕ್ಕೆ ಕೆಡವುತ್ತಿದ್ದ ಖತರ್ನಾಕ್ ತಂಡ ಈಗ ಪೊಲೀಸರ ಅತಿಥಿಯಾಗಿದ್ದಾರೆ.

₹7 ಲಕ್ಷ ಸೀಜ್
ಮೂರು ಆರೋಪಿಗಳಾದ ಪುತ್ತೂರಿನ ಮಹಮ್ಮದ್ ಶಾಫಿ (34), ಸವಣೂರಿನ ಅಜರುದ್ದೀನ್(38), ನಝೀರ್ (32) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕಾರು, ಒಂದು ಆಟೋ, ಮೂರು ಮೋಬೈಲ್​ ಸೇರಿದಂತೆ 7ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಹೈಟೆಕ್​ ಹನಿಟ್ರ್ಯಾಪ್ ತಂಡದಲ್ಲಿ ಹಲವರು ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಟಾರ್ಗೆಟ್
ಬಂಧಿತ ಯುವತಿ ಕಾರ್ಕಳದ ನತಾಶಾ ಹೆಸರಿನ ಮೇಲೆ ನೆಟ್ಟಣಿಗೆ ಮುಡ್ನೂರಿನ ಅಬ್ದುಲ್ ನಾಸೀರನನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದಾಳೆ. ಪರಿಚಯ ಸಲುಗೆಯಿಂದ ಮುಂದುವರೆದಿದ್ದು ನಾಸೀರ ನತಾಶಳಿಗೆ ನಗ್ನ ವಿಡಿಯೋ ಕಾಲ್​ ಮಾಡಿದ್ದಾನೆ. ಇದನ್ನು ರೆಕಾರ್ಡ್​ ಮಾಡಿಕೊಂಡ ನತಾಶಾ ನಗ್ನ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿ 70 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಳು ಎನ್ನಲಾಗಿದೆ. ಇಕ್ಕಟ್ಟಿಗೆ ಸಿಲುಕಿದ ನಾಸೀರ್​ ಇವರೆಗೆ 40 ಲಕ್ಷ ಹಣವನ್ನ ಸಂದಾಯ ಮಾಡಿದ್ದಾನೆ ಅಂತಾ ಹೇಳಲಾಗಿದೆ.

ಉಳಿದ ಹಣ ನೀಡುವಂತೆ ಮತ್ತೆ ಬ್ಲ್ಯಾಕ್​ಮೇಲ್​ ಮಾಡಲು ಆರಂಭಿಸಿದ ನಂತರ ಬೇಸತ್ತ ನಾಸೀರ್​ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪುತ್ತೂರು ಠಾಣೆಯ ಪೊಲೀಸರು ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿದ್ದಾರೆ.

The post ಹಣದಾಸೆಗಾಗಿ ಕೀಳು ದಂಧೆಗಿಳಿದ ದುರುಳರು; ಹೈಟೆಕ್​ ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್ appeared first on News First Kannada.

Source: newsfirstlive.com

Source link