ಲಕ್ನೋ: ಮಗನಿಗೆ ಗೊತ್ತಾಗದಂತೆ ಸೊಸೆಯನ್ನು 80 ಸಾವಿರ ರೂಪಾಯಿಗೆ ಮಾವ ಮಾರಾಟ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸೋಶಿಯಲ್ ಮೀಡಿಯಾ ಮೂಲಕವಾಗಿ ಸ್ನೇಹಿತರಾಗಿದ್ದ ಅಸ್ಸಾಂ ಮೂಲದ ಯುವತಿ ಮತ್ತು ಉತ್ತರ ಪ್ರದೇಶ ಮೂಲದ ಪ್ರಿನ್ಸ್ ಪ್ರೀತಿಸಿ ಮದುವೆಯಾಗಿದ್ದರು. ಪ್ರಿನ್ಸ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಹೀಗಾಗಿ ಗಾಜಿಯಾಬಾದ್‍ನಲ್ಲಿ ವಾಸವಾಗಿದ್ದರು. ಪ್ರಿನ್ಸ್ ತಂದೆ ಸೊಸೆಯನ್ನು ಬರಾಬಂಕಿಯಲ್ಲಿರುವ ನಮ್ಮ ನನೆಗೆ ಬಾ ಎಂದು ಕರೆದಿದ್ದರು. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

ಜೂನ್ 4ರಂದು ಸೊಸೆ ಪತಿಯ ಅಪ್ಪನ ಮನೆಗೆ ಹೋಗಿದ್ದಾಳೆ. ಅಲ್ಲಿ ಮತ್ತೊಬ್ಬ ಯುವಕನಿದ್ದು, ಸಂಜೆ ವೇಳೆ ಆತನೇ ನಿನ್ನನ್ನು ಗಂಡ ಮನೆ ಬಳಿ ಬಿಡುತ್ತಾನೆ ಎಂದು ಮಾವ ಸೊಸೆಯನ್ನು ಆತನ ಜೊತೆಗೆ ಕಳುಹಿಸಿಕೊಟ್ಟಿದ್ದಾನೆ. ಆದರೆ ಆತ ಆಕೆಯನ್ನು ಗಾಜಿಯಾಬಾದ್ ಬದಲಾಗಿ ಬೇರೆ ಕಡೆಗೆ ಕರೆದುಕೊಂಡು ಹೋಗಿದ್ದಾನೆ.

ಯುವತಿಯ ಸಹೋದರ ಪ್ರಿನ್ಸ್‌ಗೆ ಕರೆ ಮಾಡಿ ಸಹೋದರಿಯ ಕುರಿತಾಗಿ ವಿಚಾರಿಸಿದ್ದಾನೆ. ಆಗ ಪ್ರಿನ್ಸ್ ಪತ್ನಿ ಎಲ್ಲಿಯೂ ಕಾಣದೇ ಇರುವ ಕುರಿತು ಗಾಬರಿಗೊಂಡು ತನ್ನ ತಂದೆಯ ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿ ಹೆಂಡತಿಯಾಗಲೀ ತಂದೆಯಾಗಲೀ ಇಲ್ಲದಿರುವುದನ್ನು ಕಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ತನಿಖೆ ಆರಂಭಿಸಿದ ಪೊಲೀಸರಿಗೆ ಮಾವ ಸೊಸೆಯನ್ನು 80 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ವಿಚಾರ ತಿಳಿದಿದೆ. ಆ ಯುವಕ ಆಕೆಯೊಂದಿಗೆ ಮದುವೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಾವನ ಜೊತೆಗೆ ಕೈ ಜೋಡಿಸಿದ್ದ 9 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

The post ಹಣದಾಸೆಗೆ ಮಗನ ಪತ್ನಿಯನ್ನೇ ಮಾರಾಟ ಮಾಡಿದ ಅಪ್ಪ appeared first on Public TV.

Source: publictv.in

Source link