ಹಣ್ಣು ಮಾರಾಟಗಾರರಿಗೆ ಯೋಗ್ಯ ಮಾರುಕಟ್ಟೆ, ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ: ಸತೀಶ್ ಜಾರಕಿಹೊಳಿ

ಚಿಕ್ಕೋಡಿ: ಹಣ್ಣು ಮಾರಾಟಗಾರರಿಗೆ ಯೋಗ್ಯ ಮಾರುಕಟ್ಟೆ ಮತ್ತು ಹಣ್ಣು ಸಂಗ್ರಹಣಾ ಶಿಥೀಲಿಕರಣ ವ್ಯವಸ್ಥೆ ಮಾಡುವುದು ಅವಶ್ಯವಾಗಿದೆ. ಹೀಗೆಂದು ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡಾ ಜಲಾಶಯದ ಮುಖ್ಯ ರಸ್ತೆಯ ಜೀನರಾಳ ಕ್ರಾಸ್ ಹತ್ತಿರ ಇರುವ ಬೀದಿ ಬದಿ ರಸ್ತೆ ವ್ಯಾಪಾರಿಗಳಿಗೆ ಬೆಳಗಾವಿ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ತಳ್ಳುವ ಗಾಡಿ ವಿತರಣೆ ಬಳಿಕ ಮಾತನಾಡಿದ ಅವರು, ಪಪ್ಪಾಯಿ, ಪೇರಲ, ದ್ರಾಕ್ಷಿ, ಕಲ್ಲಂಗಡಿ ಮೊದಲಾದ ವಿವಿಧ ಬಗೆಯ ಹಣ್ಣುಗಳನ್ನು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹಣ್ಣು ವ್ಯಾಪಾರಸ್ಥರಿಗೆ ಸರರ್ಕಾರ ಇನ್ನೂ ಹೆಚ್ಚಿನ ಅನಕೂಲ ಮಾಡಬೇಕು ಎಂದರು. ಇದನ್ನೂ ಓದಿ:  ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟ ಸಹೋಧರರ ಮನೆಗೆ ಡಿಸಿಎಂ ಭೇಟಿ

ಯಮಕನಮರಡಿ ಕ್ಷೇತ್ರದಲ್ಲಿ ರೈತರು ಹಣ್ಣುಗಳನ್ನು ಬೆಳೆಯುತಿದ್ದಾರೆ. ಸೂಕ್ತ ಮಾರುಕಟ್ಟೆ ಮತ್ತು ಹಣ್ಣು ಸಂರಕ್ಷಣೆಗಾಗಿ ಶಿಥೀಲಿಕರಣ ಕಲ್ಪಿಸುವ ಯೋಜನೆ ಮಾಡಲಾಗುತ್ತದೆ. ಈಗ ತೋಟಗಾರಿಕೆ ಇಲಾಖೆ ವತಿಯಿಂದ ಸಂಚಾರಿ ಹಣ್ಣು ಮಾರುಕಟ್ಟೆ ಪ್ರಾರಂಭಿಸಲಾಗಿದೆ ಇದರಿಂದ ಗ್ರಾಹಕರಿಗೂ ಒಳ್ಳೆಯ ಗುಣಮಟ್ಟದ ಹಣ್ಣುಗಳನ್ನು ಪಡೆದುಕೋಳ್ಳಬಹುದು. ಬೆಳಗಾವಿ ಜಿಲ್ಲಾ ತೋಟಗಾರಿಕೆ ಉಪನಿರ್ದೆಶಕ ರವಿಂದ್ರ ಹಕಾಟೆ ಯೋಜನೆ ಕುರಿತು ಶಾಸಕರಿಗೆ ಮಾಹಿತಿ ನೀಡಿ ಬೆಳಗಾವಿ ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಬೀದಿ ಬದಿ ಹಣ್ಣು ಮಾರಾಟಗಾರರಿಗೆ ತಳ್ಳುವ ಗಾಡಿ ನೀಡುವ ಯೋಜನೆ ಇದಾಗಿದೆ ಎಂದರು.

ಈ ಸಂದರ್ಭದಲ್ಲಿ ಹುಕ್ಕೇರಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತಾತ್ಯಾಸಾಬ ನಾಂದಣಿ, ಬಸವರಾಜ್ ಬಾರಿಮನಿ, ಸಿದ್ಧಾರೂಡ ತುಪ್ಪದ, ವಿದ್ಯಾ ಬೇಟಗೇರಿ ಹಾಗೂ ಜಿಲ್ಲಾ ಪಂಚಾಯತ ಸದಸ್ಯರಾದ ಮಂಜುನಾಥ್ ಪಾಟೀಲ, ಮಹಾಂತೇಶ್ ಮಗದುಮ್ಮ, ಯಮಕನಮರ್ಡಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿ ಜಿಂಡ್ರಾಳೆ, ದಸ್ತಗೀರ ಬಸ್ಸಾಪೂರಿ, ಕಿರಣ್ ರಜಪೂತ, ಮಹಾದೇವ ಪಟೋಳಿ, ಮೊದಲಾದವರು ಉಪಸ್ಥಿತರಿದ್ದರು.

The post ಹಣ್ಣು ಮಾರಾಟಗಾರರಿಗೆ ಯೋಗ್ಯ ಮಾರುಕಟ್ಟೆ, ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ: ಸತೀಶ್ ಜಾರಕಿಹೊಳಿ appeared first on Public TV.

Source: publictv.in

Source link