ಮೈಸೂರು:  ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ತೀರಿಕೊಂಡ ನಂತರ, ಬಿಲ್​​ನ ಬಾಕಿ‌ ಹಣಕ್ಕೆ ಒತ್ತಾಯಿಸಿ ಮೃತದೇಹ ಹಸ್ತಾಂತರಿಸದ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಈ ರೀತಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ಕಾಯ್ದೆ(ಕರ್ನಾಟಕ ಪ್ರೈವೇಟ್​​ ಮೆಡಿಕಲ್ ಎಸ್ಟಾಬ್ಲಿಷ್​​ಮೆಂಟ್​​ ಆ್ಯಕ್ಟ್​-2007) ಅಡಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಕೋವಿಡ್ ಸೋಂಕಿತರು ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಬಾಕಿ ಹಣಕ್ಕೆ ಒತ್ತಾಯಿಸುವಂತಿಲ್ಲ. ಹಣ ಪಾವತಿಸುವವರೆಗೂ ಶವ ಹಸ್ತಾಂತರಿಸಲು ನಿರಾಕರಿಸುವಂತಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ವಾರಕ್ಕೆ ಒಮ್ಮೆ ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕೆಂದು
ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಆದೇಶ ಹೊರಡಿಸಿದ್ದಾರೆ.

The post ಹಣ ಕೊಟ್ರೆನೇ ಶವ ಕೊಡೋದು ಅನ್ನೋ ಆಸ್ಪತ್ರೆಗಳಿಗೆ ವಾರ್ನಿಂಗ್, KPME ಕಾಯ್ದೆ ಅಡಿ ಬೀಳುತ್ತೆ ಕೇಸ್ appeared first on News First Kannada.

Source: newsfirstlive.com

Source link