ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮ ಪತ್ನಿ ಮೆಲಿಂದಾ ಅವರಿಂದ ಇತ್ತೀಚಿಗೆ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಪತ್ನಿಯಿಂದ ದೂರವಾದ ಬಿಲ್ ಗೇಟ್ಸ್ರಿಗೆ ಈಗೊಂದು ಮದುವೆ ಪ್ರಸ್ತಾಪ ಬಂದಿದೆ.
ಹೌದು ಕುವೈತ್ನ ನಟಿ, ಗಾಯಕಿ ಶಾಮ್ಸ್ ಬಂದರ್ ಅಲ್-ಅಸ್ಲಾಮಿ ಬಿಲ್ ಅವರು ಬಿಲ್ ಗೇಟ್ಸ್ ಅವರನ್ನು ಮದುವೆಯಾಗುವುದಾಗಿ ಇಚ್ಛೆ ವ್ಯಕ್ತಪಡಿಸಿದ್ದಾರೆ. 41 ವರ್ಷದ ಅಸ್ಲಾಮಿ ತನ್ನ ಪತಿಯಿಂದ ದೂರವಾಗಿದ್ದು, ಸದ್ಯ ಬಿಲ್ ಗೇಟ್ಸ್ರನ್ನು ವರಿಸಲು ಪ್ರಪೋಸಲ್ ಇಟ್ಟಿದ್ದಾರೆ. ಆದ್ರೆ ಈ ಪ್ರಪೋಸಲ್ಗೆ ಬಿಲ್ಗೇಟ್ಸ್ ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ.
ಇದನ್ನೂ ಓದಿ:ಹರಾಜಿಗಿದೆ ‘ಕುಂಭ ಮೇಳ’ದ ಬಗ್ಗೆ ಸ್ಟೀವ್ ಜಾಬ್ಸ್ ಬರೆದಿದ್ದ ಅಪರೂಪದ ವಿಶೇಷ ಪತ್ರ..!
ಬಿಲ್ ಗೇಟ್ಸ್ ಇತ್ತಿಚಿಗೆ ಸಂದರ್ಶನವೊಂದಕ್ಕೆ ನೀಡಿದ ಹೇಲಿಕೆಗಳನ್ನು ಪತ್ರಿಯೊಂದು ವರದಿ ಮಾಡಿತ್ತು. ಆ ವರದಿಯನ್ನು ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಅದನ್ನು ರಿಟ್ವೀಟ್ ಮಾಡಿದ ನಟಿಬಿಲ್ ಗೇಟ್ಸ್ ತುಂಬ ಸುಂದರವಾಗಿದ್ದಾರೆ. ಅವರೊಬ್ಬ ಪ್ರವಾದಿ ತರ ಮುಂದೇನಾಗಬಹುದು ಎಂದು ಅವರು ಭವಿಷ್ಯವಾಣಿ ಹೇಳುತ್ತಿರುವುದು ನನಗೆ ತುಂಬ ಇಷ್ಟವಾಯಿತು. ನಾನು ಅವರನ್ನು ಮದುವೆಯಾಗಲು ರೆಡಿಯಾಗಿದ್ದೇನೆ. ನನ್ನ ಪ್ರಪೋಸಲ್ನ್ನು ಅವರು ಒಪ್ಪಿಕೊಳ್ಳುವ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವೀರವನಿತೆ ಒನಕೆ ಓಬವ್ವರ ನೆನಪಿಸಿಕೊಂಡು ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ
جميل هذا الانسان نبي العصر الالكتروني عاجبني تنبؤاته ومعرفته بلي جاي انا اعرض عليه الزواج تتوقعون يوافق؟؟؟ https://t.co/H2WLlHtQeQ
— #شمس ☀️ (@shamsofficial) November 5, 2021