ಬೆಂಗಳೂರು: ಆತ ಬೆಂಗಳೂರಿನ ಖ್ಯಾತ ಉದ್ಯಮಿ. ತನ್ನದೇ ಸಂಸ್ಥೆಯೊಂದನ್ನ ಹುಟ್ಟುಹಾಕಿ ಹತ್ತಾರು ಜನರಿಗೆ ಉದ್ಯೋಗ ನೀಡಿದಾತ. ಆದರೆ ಉದ್ಯಮ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರೋ ಈತನಿಗೆ ಅದೊಂದು ಹುಡುಗಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಕ್ಮಲ್ ಟೋಪಿ ಹಾಕಿದ್ದಾಳೆ. ಹುಡುಗಿ ಮಾತು ನಂಬಿ ಲಕ್ಷಲಕ್ಷ ಹಣ ನೀಡಿದ ಉದ್ಯಮಿ ಸ್ಥಿತಿ ಈಗ ಅತ್ತ ಹುಡುಗಿಯೂ ಇಲ್ಲ.. ಇತ್ತ ಹಣವೂ ಇಲ್ಲ ಎಂಬಂತಾಗಿದೆ.

ಹುಡುಗಿ ನಂಬಿ ಲಕ್ಷ ಲಕ್ಷ ಹಣ ಕಳೆದುಕೊಂಡ ಉದ್ಯಮಿ
ಮದುವೆಯಾಗೋದಾಗಿ ನಂಬಿಸಿ 36 ಲಕ್ಷ ರೂಪಾಯಿ ವಂಚನೆ

ಪ್ರೀತಿ ಅಂದ್ರೇನೆ ನಂಬಿಕೆ. ಯಾರೇ ಆಗ್ಲಿ ತಾವು ಪ್ರೀತಿಸೋರನ್ನ ಅತಿಯಾಗಿ ನಂಬಿರ್ತಾರೆ. ಆದರೆ ಅದೇ ನಂಬಿಕೆಯನ್ನ ಬಂಡವಾಳ ಮಾಡಿಕೊಂಡ ಯುವತಿಯೊಬ್ಬಳು ಬೆಂಗಳೂರಿನ ಉದ್ಯಮಿಗೆ ವಂಚಿಸಿದ್ದು ಬರೋಬ್ಬರಿ 36 ಲಕ್ಷ ರೂಪಾಯಿ.

ಈ ಫೋಟೋದಲ್ಲಿ ಇದ್ದಾರಲ್ಲ. ಇವರೇ ಪ್ರೀತಿ ಹೆಸರಲ್ಲಿ ಮೊಸ ಹೋದವರು. ಹೆಸರು ಅನಂತ್​ ಮಲ್ಯ. ಬೆಂಗಳೂರಿನ ಖ್ಯಾತ ಉದ್ಯಮಿ. ಕ್ವಾನ್​ಟೆಕ್ ಕನ್ಸಲ್ಟೆನ್ಸಿ ಅನ್ನೋ ಕಂಪನಿಯ ಸಿಇಒ. ಸ್ವತಃ ಸ್ಕಿಲ್ ಡೆವೆಲೆಪರ್​ ಕೂಡ ಹೌದು. ಆದರೆ ಪ್ರೀತಿ ಹೆಸರಲ್ಲಿ ನಾಟಕವಾಡ್ತಿದ್ದ ಯುವತಿಯ ಸಂಚು ಅರಿಯದೇ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ.

ಉದ್ಯಮಿ ಅನಂತ್ ಮಲ್ಯರಿಗೆ 2019ರ ಜೂನ್​ನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಯುವತಿ ಪರಿಚಯವಾಗಿದ್ದಾಳೆ. ಬಳಿಕ ಅನಂತ್ ಮಲ್ಯರ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಯುವತಿಯ ಪ್ರಪೋಸಲ್​ಗೆ ಅನಂತ್​ ಮಲ್ಯ ಸಮ್ಮತಿ ಸೂಚಿಸಿದ್ದಾರೆ. ನಂತರ ಯುವತಿ ಅನಂತ್​ ಮಲ್ಯರ ಬಳಿ ಹಂತಹಂತವಾಗಿ 36 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಚಿಟ್ ಫಂಡ್ ಕಟ್ಟಬೇಕು, ಸೈಟ್ ತೋಗೋಳ್ಬೇಕು ಅನ್ನೋ ಕಾರಣ ನೀಡಿ ಯುವತಿ ಹಣ ಪಡೆದುಕೊಂಡಿದ್ದಾಳಂತೆ. ಆದ್ರೆ ಕೊನೆಗೆ ಹಣ ವಾಪಸ್ ನೀಡದೇ, ಮದುವೆಯೂ ಆಗದೇ ಯುವತಿ ಎಸ್ಕೇಪ್ ಆಗಿದ್ದಾಳೆ ಅಂತ ಆರೋಪ ಮಾಡಲಾಗಿದೆ.

ಸದ್ಯ ಯುವತಿಯಿಂದ ವಂಚನೆಗೊಳಗಾಗಿರೋ ಉದ್ಯಮಿ ಅನಂತ್  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೀತಿ ಹೆಸರಲ್ಲಿ ಪಂಗನಾಮ ಹಾಕಿದ ಯುವತಿಯ ವಿರುದ್ಧ HAL ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420ರ ಅಡಿ ಪ್ರಕರಣ ದಾಖಲಾಗಿದ್ದು, ಯುವತಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರೀತಿ ಪ್ರೇಮ ಮದುವೆ ಎಲ್ಲಾ ಓಕೆ. ಆದರೆ, ಮದುವೆಗೂ ಮೊದಲೇ ಹಣಕಾಸು ವ್ಯವಹಾರ ಮಾತ್ರ ನಾಟ್​ ಓಕೆ. ಇದರ ಬಗ್ಗೆ ಯಾರಿಗೇ ಅದ್ರೂ ಜಾಗ್ರತೆ ಇರಬೇಕು ಜೋಕೆ.

The post ಹತ್ತಾರು ಜನರಿಗೆ ಉದ್ಯೋಗ ನೀಡಿದಾತನಿಗೆ ಮೋಸ ಮಾಡಿದ್ಳು ಯುವತಿ appeared first on News First Kannada.

Source: newsfirstlive.com

Source link