ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಉದಯ್ ಗಾಣಿಗ ಮನೆಗೆ ಡಿಕೆಎಸ್ ಭೇಟಿ; ಚೆಕ್ ವಿತರಣೆ

ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಉದಯ್ ಗಾಣಿಗ ಮನೆಗೆ ಡಿಕೆಎಸ್ ಭೇಟಿ; ಚೆಕ್ ವಿತರಣೆ

ಉಡುಪಿ: ಇತ್ತೀಚಿಗೆ ಉಡುಪಿಯ ಯಡಮೊಗೆಯಲ್ಲಿ ಕೊಲೆಯಾದ ಬಿಜೆಪಿ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಭೇಟಿ ನೀಡಿದ ಅವರು ಮನೆಯವರಿಗೆ ಒಂದು ಲಕ್ಷದ ಇಪ್ಪತೈದು ಸಾವಿರ ಮೊತ್ತದ ಚೆಕ್ ವಿತರಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಉದಯ್ ಗಾಣಿಗ ಒಂದೇ ಕೊಲೆಯಲ್ಲ, ಹಲವು ಕೊಲೆಗಳು ಆಗಿವೆ. ಎಲ್ಲ ಕೊಲೆಗಳನ್ನು ಮುಚ್ಚಿ ಹಾಕುವ ದೊಡ್ಡ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಬೇರೆ ಕೊಲೆಗಳು ನಡೆದಾಗ ಸಿಬಿಐಗೆ ವಹಿಸಿದ್ದಾರೆ. ಇದನ್ನು ಕೂಡ ಸಿಬಿಐಗೆ ವಹಿಸಿ, ಸಾವಿಗೆ ನ್ಯಾಯ ದೊರಕಿಸಿ ಕೊಡಿ. ಉದಯ್ ಗಾಣಿಗ ಬಿಜೆಪಿ ಪಕ್ಷಕ್ಕೆ ದುಡಿದಿದ್ದಾನೆ ಅಂತ ಹೆಣ್ಣು ಮಗಳು ಹೇಳುತ್ತಾಳೆ. ಕೊಲೆ ಮಾಡಿದ್ದು, ಬಿಜೆಪಿ ಪಂಚಾಯತ್ ಅಧ್ಯಕ್ಷನೇ ಎಂದು ಆರೋಪಿಸಿದ್ದಾರೆ. ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸುವ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇವೆ ಎಂದು ಜಿಲ್ಲೆಯ ಯಡಮೊಗೆ ಉದಯ್ ಗಾಣಿಗ ಮನೆಯಲ್ಲಿ ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ತನ್ನ ವಿರುದ್ಧ ಸ್ಟೇಟಸ್​​​ ಹಾಕಿದ್ದಕ್ಕೆ ಗ್ರಾಮಸ್ಥನನ್ನ ಕೊಲೆಗೈದನಾ ಗ್ರಾ.ಪಂ​​ ಅಧ್ಯಕ್ಷ?

The post ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಉದಯ್ ಗಾಣಿಗ ಮನೆಗೆ ಡಿಕೆಎಸ್ ಭೇಟಿ; ಚೆಕ್ ವಿತರಣೆ appeared first on News First Kannada.

Source: newsfirstlive.com

Source link