ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಖುಲಾಸೆ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ಮುಂದೂಡಿಕೆ | Hearing On Plea Against Union Minister Ajay Mishra’s acquittal Case deferred till October 17


ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ರೇಣು ಅಗರವಾಲ್ ಅವರು ಈ ಆದೇಶ ನೀಡಿದ್ದಾರೆ. ಈ ಪ್ರಕರಣವು 2000 ರಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರಭಾತ್ ಗುಪ್ತಾ ಕೊಲೆಗೆ ಸಂಬಂಧಿಸಿದ್ದಾಗಿದೆ.

ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಖುಲಾಸೆ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ಮುಂದೂಡಿಕೆ

ಅಜಯ್ ಮಿಶ್ರಾ

ಲಖನೌ: 20 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರನ್ನು ಖುಲಾಸೆಗೊಳಿಸಿದನ್ನು  ಪ್ರಶ್ನಿಸಿ  2004 ರಲ್ಲಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ಮಂಗಳವಾರ ಅಕ್ಟೋಬರ್ 17 ಕ್ಕೆ ಮುಂದೂಡಿದೆ. ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ರೇಣು ಅಗರವಾಲ್ ಅವರು ಈ ಆದೇಶ ನೀಡಿದ್ದಾರೆ. ಈ ಪ್ರಕರಣವು 2000 ರಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರಭಾತ್ ಗುಪ್ತಾ ಕೊಲೆಗೆ ಸಂಬಂಧಿಸಿದ್ದಾಗಿದೆ. ಪ್ರಕರಣದ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್‌ನ ಪ್ರಧಾನ ಪೀಠಕ್ಕೆ ವರ್ಗಾಯಿಸಲು ಸಚಿವರು ಕೋರಿದ್ದರು ಆದರೆ ಮುಖ್ಯ ನ್ಯಾಯಾಧೀಶರು ಮನವಿಯನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ವಿಚಾರಣೆಯ ಸಂದರ್ಭದಲ್ಲಿ ಅಜಯ್ ಮಿಶ್ರಾ ಅವರ ವಕೀಲರು ಪೀಠಕ್ಕೆ ತಿಳಿಸಿದರು. ಇದಾದ ನಂತರ ಮಿಶ್ರಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿ ಕೆಲವ ದಿನಗಳ ನಂತರ ವಿಚಾರಣೆ ನಡೆಯಲಿದೆ. ಹಾಗಾಗಿ ಮೇಲ್ಮನವಿಯನ್ನು ಅಲ್ಲಿಯವರೆಗೆ ಮುಂದೂಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.

ಆದಾಗ್ಯೂ, ಆರೋಪಿ ಪರ ವಾದಿಸುತ್ತಿರುವ ವಕೀಲ ಜ್ಯೋತಿಂದ್ರ ಮಿಶ್ರಾ ಇದನ್ನು ವಿರೋಧಿಸಿದ್ದು, ಅಜಯ್ ಮಿಶ್ರಾ ಅವರ ಖುಲಾಸೆ ವಿರುದ್ಧ ಪ್ರಸ್ತುತ ಮೇಲ್ಮನವಿಯನ್ನು 2004 ರಲ್ಲಿ ಸಲ್ಲಿಸಲಾಗಿದೆ . ಈ ಹಿಂದೆಯೂ ವಿಚಾರಣೆ ಮುಂದೂಡಲು ಕೋರಲಾಗಿತ್ತು ಎಂದು ಅವರು ಹೇಳಿದರು. ವಕೀಲರ ವಾದವನ್ನು ಆಲಿಸಿದ ಪೀಠ, ”ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ರಜಾ ಕಾಲದ ಅರ್ಜಿ ಸಲ್ಲಿಕೆಯಾಗಿರುವುದರಿಂದ ಮತ್ತು ಡೈರಿ ಸಂಖ್ಯೆಯನ್ನು ನೀಡಿರುವುದರಿಂದ ಈ ವಿಷಯವನ್ನು ಮುಂದೂಡುವುದು ಸೂಕ್ತ ಎಂದು ನ್ಯಾಯಾಲಯ ಪರಿಗಣಿಸಿದೆ, ಆದರೆ ಈ ಕುರಿತು ಮುಂದಿನ ದಿನಾಂಕದಂದು ಇದೇ ಮನವಿಗೆ ಯಾವುದೇ ಮುಂದೂಡಿಕೆಯನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಪ್ರಭಾತ್ ಗುಪ್ತಾ ಹತ್ಯೆಯ ವಿಚಾರಣೆಯನ್ನು ಎದುರಿಸಿದ್ದು 2004 ರಲ್ಲಿ ಖುಲಾಸೆಗೊಂಡರು, ನಂತರ ರಾಜ್ಯವು ಮೇಲ್ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿ

TV9 Kannada


Leave a Reply

Your email address will not be published.