ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್: 14 ಲಕ್ಷಕ್ಕೂ ಹೆಚ್ಚು ಹಣ ವಂಚನೆ | Budding Actor Arrested For Honeytrap: More Than 14 Lakh Money Fraud


ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಉದಯೋನ್ಮುಖ ನಟ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ ಎನ್ನಲಾಗುತ್ತಿದೆ. ಉದ್ಯಮಿಗೆ ಇತ್ತೀಚೆಗೆ ಪರಿಚಯ ಆಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ.

ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್: 14 ಲಕ್ಷಕ್ಕೂ ಹೆಚ್ಚು ಹಣ ವಂಚನೆ

ಹನಿಟ್ರಾಪ್ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ಮೂಲದ ಉದ್ಯಮಿಗೆ ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್ ಆಗಿರುವಂತಹ ಘಟನೆ ನಡೆದಿದೆ. ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ. ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ಆರೋಪಿ ನಾಯಕನಾಗಿದ್ದ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಉದಯೋನ್ಮುಖ ನಟ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ ಎನ್ನಲಾಗುತ್ತಿದೆ. ಉದ್ಯಮಿಗೆ ಇತ್ತೀಚೆಗೆ ಪರಿಚಯ ಆಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. ನಂತರ ಉದ್ಯಮಿಗೆ ಬೇಟಿಯಾಗಿದ್ದ ತಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿದ್ದ. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೇಳಿದ್ದ.

ನಂತರ ಕೇಸ್ ಮುಂದುವರೆಸದಿರಲು ಹಣ ಕೇಳಿದ್ದು, ಮೊದಲಿಗೆ ಐವತ್ತು ಸಾವಿರ, ನಂತರ ಬ್ಯಾಂಕ್​ನಲ್ಲಿ ಮೂರು ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ. ಹಲಸೂರು ಗೇಟ್ ಬಳಿ ಸಹ ಒಮ್ಮೆ ಹಣ ಪಡೆದಿದ್ದು, ಉದ್ಯಮಿಗೆ ಡೌಟ್ ಬಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *