ಲಂಡನ್: ಹನಿಮೂನ್ ನಲ್ಲಿ ತೆರಳಿದಾಗ ಪತಿ ಅವನಲ್ಲ, ಅವಳು ಎಂಬ ರಹಸ್ಯ ಪತ್ನಿಗೆ ಗೊತ್ತಾಗಿದೆ. ವಿಷಯ ತಿಳಿದ ಬಳಿಕ ಪತ್ನಿ ತೆಗೆದುಕೊಂಡ ನಿರ್ಧಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಬ್ರಿಟನ್ ಗ್ರಾಫಿಕ್ ಡಿಸೈನರ್ ಜೆಕ್ ಮತ್ತು ಅಮೆರಿಕದ ಹಾರ್ವಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಜೆಕ್ ಮತ್ತು ಹಾರ್ವಿ ಹನಿಮೂನ್ ಗಾಗಿ ಸುಂದರ ದ್ವೀಪಕ್ಕೆ ತೆರಳಿದ್ದರು. ಈ ವೇಳೆ ಹಾರ್ವಿಗೆ ತನ್ನ ಪತಿ ಪುರುಷನಲ್ಲಿ ಅನ್ನೋ ರಹಸ್ಯ ತಿಳಿದಿದೆ. ಪತಿ ಸಹ ತಾನು ಮಹಿಳೆಯಂತೆ ಇರಲು ಇಷ್ಟಪಡೋದಾಗಿ ಪತ್ನಿ ಮುಂದೆ ಹೇಳಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಲೇ ಹಾರ್ವಿ ಪತಿಯನ್ನು ನಿಂದಿಸದೇ ಆತನಿಗೆ ಅವನ ಇಷ್ಟದಂತೆ ಇರಲು ಅನುಮತಿ ನೀಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ: 33 ವರ್ಷದ ಜೆಕ್ ಮತ್ತು 30 ವರ್ಷದ ಹಾರ್ವಿ 2007ರಲ್ಲಿ ಆನ್‍ಲೈನ್ ನಲ್ಲಿ ಭೇಟಿಯಾಗಿದ್ದರು. 2010ರಲ್ಲಿ ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ಹೀಗೆ ಇಬ್ಬರ ಪ್ರೀತಿ ಕೆಲ ವರ್ಷಗಳವರೆಗೆ ಮುಂದುವರಿದಿದೆ. 2018ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. ಮದುವೆಯ ಮೂರು ತಿಂಗಳ ನಂತ್ರ ಹನಿಮೂನ್ ಗಾಗಿ ತೆರಳಿದಾಗ ಜೆಕ್, ತನ್ನಲ್ಲಾಗುವ ಬದಲಾವಣೆಗಳನ್ನು ಹಾರ್ವಿ ಜೊತೆ ಹಂಚಿಕೊಂಡಿದ್ದಾನೆ. ನಾನು ಟ್ರಾನ್ಸ್‍ಜೆಂಡರ್ ಆಗಿ ಬದಲಾಗುವ ಇಚ್ಛೆಯನ್ನ ಸಹ ವ್ಯಕ್ತಪಡಿಸಿದ್ದಾನೆ.

ಪತಿಗೆ ಶಸ್ತ್ರಚಿಕಿತ್ಸೆ: ಹಾರ್ವಿ ತನ್ನ ಉಳಿತಾಯದ ಹಣದಿಂದ ಅಂದ್ರೆ ಬರೋಬ್ಬರಿ 45 ಸಾವಿರ ಪೌಂಡ್ ಖರ್ಚು ಮಾಡಿ ಪತಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಪತಿಗೆ ಮೇಕಪ್ ಮಾಡೋದು, ಹುಡುಗಿಯರಂತೆ ಡ್ರೆಸ್ ತೊಡಿಸಿ ಹಾರ್ವಿ ಖುಷಿ ಪಡ್ತಾರೆ ಎಂದು ವರದಿಯಾಗಿದೆ.

ಮರು ಮದುವೆಗೆ ಮುಂದಾದ ಜೋಡಿ : ಶಸ್ತ್ರಚಿಕಿತ್ಸೆ ಬಳಿಕ ಹಾರ್ವಿ ಮತ್ತು ಜೆಕ್ ಮತ್ತೊಮ್ಮೆ ಮದುವೆಯಾಗಲು ಮುಂದಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಜೆಕ್ ತನ್ನ ಹೆಸರನ್ನ ರಾಯನಾ ಅಂತ ಬದಲಿಸಿಕೊಂಡಿದ್ದಾನೆ. ಸದ್ಯ ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

The post ಹನಿಮೂನ್‍ನಲ್ಲಿ ಗೊತ್ತಾಯ್ತು ಪತಿ ಅವನಲ್ಲ, ಅವಳು – ಪತ್ನಿಯ ನಿರ್ಧಾರಕ್ಕೆ ಮೆಚ್ಚುಗೆ appeared first on Public TV.

Source: publictv.in

Source link