ಬೆಂಗಳೂರು: ಹಮಾರ ಕುತ್ತಾ ಹಮಾರ ಗಲ್ಲಿ ಮೆ ಷೇರ್ ತರಹ ಸಿಎಂ ಯಡಿಯೂರಪ್ಪ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಸವನಗುಡಿಯ ಶ್ರೀನಗರದಲ್ಲಿ ರೇಷನ್ ಕಿಟ್ ವಿತರಿಸಿ ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಕೇಂದ್ರದಲ್ಲಿ ಏನು ಮಾತಾಡಲ್ಲ. 15ನೇ ಹಣಕಾಸು ಆಯೋಗದ ವರದಿಯಂತೆ ನಮಗೆ 5495 ಕೋಟಿ ಹಣ ಬರಬೇಕು. ಯಾರು ಸಹ ತುಟಿ ಬಿಚ್ಚಲ್ಲ. ನಾನು ಸಿಎಂ ಆಗಿದ್ದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ ಮುಂದೆ ಧರಣಿ ಮಾಡುತ್ತಿದ್ದೆ. ಸಿಎಂಗೆ ತೆಗೆಯುತ್ತಾರೆ ಎಂದು ಭಯ. ಇಂತಹ ಸರ್ಕಾರ ಬೇಕಾ? ಬಸವನಗುಡಿ ಜನ ದಯವಿಟ್ಟು ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಪ್ರತಿಯೊಬ್ಬರಿಗೂ ಹತ್ತು ಸಾವಿರ ಕೊಡಿ ಎಂದು ಒತ್ತಾಯ ಮಾಡಿದ್ದೇವು. ನಾವು ಇದ್ದಿದ್ದರೆ ಹತ್ತು ಸಾವಿರ, ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೆವು. ಈಗ ಇವರು ಎರಡು ಕೆಜಿ ಅಕ್ಕಿ ಕೊಡುತ್ತಿದ್ದಾರೆ.ಹತ್ತು ಕೆಜಿ ಕೊಟ್ಟಿದ್ರೆ ಇವರ ಗಂಟೇನು ಹೋಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಹಾ ವಾಗ್ದಾಳಿ ನಡೆಸಿದರು. ಅವನು ಸೂರ್ಯ ಅಲ್ಲ ಕತ್ತಲು, ರವಿ ಸುಭ್ರಮಣ್ಯ ಏನು ಮಾಡುತ್ತಿದ್ದಾರೆ ಎಂದು ಕೇಳಬೇಕು. ಜಯದೇವ ಡಾಕ್ಟರ್ ಮಂಜುನಾಥ್ ಹೇಳಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ 3ನೇ ಅಲೆ ಬರಬಹುದು. ಮಕ್ಕಳಿಗೆ ಬರಬಹುದು ಎಂದು ಹೇಳಿದ್ದಾರೆ. ತಜ್ಞರು ಹೇಳಿದರೂ ಸಹ ಇವರು ಜಾಗೃತೆ ವಹಿಸುತ್ತಿಲ್ಲ. ಬಡವರಿಗೆ ಇಂದಿರಾ ಕ್ಯಾಂಟಿನ್ ಮಾಡಿದೆ. ಅದನ್ನ ಮುಚ್ಚಿದ್ರು ಇವರು ಮನೆ ಹಾಳಾಗ. ಈ ದೇಶದಲ್ಲಿ ರಾಜಕಾರಣದ ಸೂರ್ಯ ಇದ್ರೆ ಅದು ಅಂಬೇಡ್ಕರ್ ಮಾತ್ರ. ಉಳಿದವರು ಯಾರು ಸೂರ್ಯನೂ ಅಲ್ಲ ಚಂದ್ರನೂ ಅಲ್ಲ ಎಂದು ಹೇಳುತ್ತಾ ತೇಜಸ್ವಿ ಸೂರ್ಯಗೆ ಪರೋಕ್ಷವಾಗಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

The post ಹಮಾರ ಕುತ್ತಾ ಹಮಾರ ಗಲ್ಲಿ ಮೇ ಷೇರ್ ತರಹ ಬಿಎಸ್‌ವೈ: ಸಿದ್ದರಾಮಯ್ಯ appeared first on Public TV.

Source: publictv.in

Source link